ETV Bharat / state

'ಚುನಾವಣೆಗೂ ಮುನ್ನವೇ ಪ್ರಧಾನಿ ಅಭ್ಯರ್ಥಿ ಘೋಷಿಸುವುದು ಸಂವಿಧಾನಬಾಹಿರ'

author img

By

Published : Mar 31, 2019, 7:35 PM IST

ಒಂದು ಪಕ್ಷವು ಚುನಾವಣೆಗೂ ಮುನ್ನವೇ ವ್ಯಕ್ತಿವೋರ್ವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿಕೊಳ್ಳಬಹುದು. ಆದರೆ, ಇಂತವರೇ ಪ್ರಧಾನಿ ಅಭ್ಯರ್ಥಿ ಎಂದು ಹೇಳುವುದು ಪ್ರಜಾತಂತ್ರ ವ್ಯವಸ್ಥೆಗೆ ವಿರೋಧಿಯಾಗಿದೆ. ಇದರಿಂದಾಗಿ ಭಾರತೀಯ ವ್ಯವಸ್ಥೆಯಲ್ಲಿ ಶಾಸಕರ ಮತ್ತು ಸಂಸದರ ಹಕ್ಕುಗಳನ್ನು ಕಿತ್ತುಕೊಂಡಂತಹ ವ್ಯವಸ್ಥೆ ಆಗಿರುತ್ತದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ವಿಶ್ಲೇಷಣೆ ಮಾಡಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ

ತುಮಕೂರು: ರಾಷ್ಟ್ರೀಯ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸುತ್ತಿರುವುದು ಸಂವಿಧಾನಬಾಹಿರ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ವಿಶ್ಲೇಷಿಸಿದ್ದಾರೆ.

'ಈಟಿವಿ ಭಾರತ' ಗೆನೀಡಿರುವವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನವು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೊಟ್ಟಿರುವಂತಹುದು. ಪ್ರಧಾನಿ ಅಭ್ಯರ್ಥಿಯನ್ನು ಸಂಸದರು ಆಯ್ಕೆ ಮಾಡಬೇಕು. ಅದೇ ರೀತಿ ಮುಖ್ಯಮಂತ್ರಿಯನ್ನು ಶಾಸಕರು ಆಯ್ಕೆ ಮಾಡಬೇಕು. ಹೀಗಾಗಿ ಚುನಾವಣೆಗೂ ಮುನ್ನವೇ ಪ್ರಧಾನಿ ಅಭ್ಯರ್ಥಿ ಹೆಸರನ್ನು ಘೋಷಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದರು.

ಸಾಹಿತಿ ಬರಗೂರು ರಾಮಚಂದ್ರಪ್ಪ

ಒಂದು ಪಕ್ಷವು ಚುನಾವಣೆಗೂ ಮುನ್ನವೇ ವ್ಯಕ್ತಿವೋರ್ವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿಕೊಳ್ಳಬಹುದು. ಆದರೆ, ಇಂತವರೇ ಪ್ರಧಾನಿ ಅಭ್ಯರ್ಥಿ ಎಂದು ಹೇಳುವುದು ಪ್ರಜಾತಂತ್ರ ವ್ಯವಸ್ಥೆಗೆ ಕಟ್ಟಾ ವಿರೋಧಿಯಾಗಿದೆ. ಇದರಿಂದಾಗಿ ಭಾರತೀಯ ವ್ಯವಸ್ಥೆಯಲ್ಲಿ ಶಾಸಕರ ಮತ್ತು ಸಂಸದರ ಹಕ್ಕುಗಳನ್ನು ಕಿತ್ತುಕೊಂಡಂತಾಗುತ್ತದೆ ಎಂದು ಬರಗೂರು ವಿಶ್ಲೇಷಣೆ ಮಾಡಿದರು.

ಭಾರತವು ಉಳಿಗಮಾನ್ಯ ಪದ್ಧತಿಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಸ್ಥಿತ್ಯಂತರಗೊಂಡಿದೆ. ಆದರೂ ಕೂಡ ಉಳಿಗಮಾನ್ಯ ಪದ್ಧತಿಯ ಕೆಲವೊಂದು ಪಳೆಯುಳಿಕೆಗಳು ಉಳಿದುಕೊಂಡಿವೆ. ಒಂದು ಪಕ್ಷಕ್ಕೆ ನಾಯಕ ಇರುವುದು ತಪ್ಪಲ್ಲ. ಆದರೆ, ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದು ತಪ್ಪು. ಹೀಗಿದ್ದಾಗ ಸಂಸದರನ್ನು ನಾವ್ ಯಾಕೆ ಆಯ್ಕೆ ಮಾಡಬೇಕು ಎಂದು ಬರಗೂರು ರಾಮಚಂದ್ರಪ್ಪ ಪ್ರಶ್ನಿಸಿದರು.

ಮತದಾರರು ಸಂಸದರನ್ನು ಆಯ್ಕೆ ಮಾಡುತ್ತಾರೆ. ಅದು ಅವರ ಹಕ್ಕು, ಅದೇ ರೀತಿ ಸಂಸದರಿಗೆ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡುವಂತಹ ಹಕ್ಕನ್ನು ನಾವು ನೀಡಿರುತ್ತೇವೆ. ಆದ್ರೆ ಚುನಾವಣೆ ಮುನ್ನವೇ ಪ್ರಧಾನಿ ಅಭ್ಯರ್ಥಿ ಇಂತವರೇ ಎಂದು ಘೋಷಿಸಿದರೆ ಒಂದು ರೀತಿ ನಾವಿನ್ನೂ ಉಳಿಗಮಾನ್ಯ ಪದ್ಧತಿಯಲ್ಲೇ ಇದ್ದೇವೆಯೇ ಎಂಬ ಭಾವನೆ ಮೂಡುತ್ತಿದೆ ಎಂದರು.

Intro:ತುಮಕೂರು: ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಯನ್ನು ಮೊದಲೇ ಘೋಷಣೆ ಮಾಡುವುದಾದರೆ, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವವವಾಗುವುದಿಲ್ಲ, ಲ ಅಧ್ಯಕ್ಷೀಯ ಪ್ರಜಾಪ್ರಭುತ್ವವಾಗಯಲುತ್ತದೆ. ಭಾರತದಲ್ಲಿ ಏಕ ನಾಯಕತ್ವದ ಮನೋಧರ್ಮ ಸೃಷ್ಟಿಯಾಗುತ್ತಿದೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

Body:ತುಮಕೂರಿನ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ರಾಜ್ಯಮಟ್ಟದ ಸೈದ್ಧಾಂತಿಕ ಸಂವಿಧಾನ ಸಮಾವೇಶವನ್ನು ಉದ್ಘಾಟಿಸಿ ಪ್ರೊಫೆಸರ್ ರಾಮಚಂದ್ರಪ್ಪ ಮಾತನಾಡಿದರು.
ನಾಡಿನ ಯುವಜನತೆಗೆ ಇಂತಹ ಕಾರ್ಯಕ್ರಮಗಳು ಅಗತ್ಯ ವಿದ್ದು, ನಮ್ಮಲ್ಲಿರುವ ಸಂಕುಚಿತ ಆಶಯಗಳ ಬಗ್ಗೆ ಆಲೋಚಿಸುತ್ತಾ, ಸಮಾನತೆ ಮತ್ತು ಸಹಿಷ್ಣುತೆಯಿರುವ, ಸಮಾಜ ನಿರ್ಮಾಣಕ್ಕೆ ಬೇಕಾಗಿರುವಂತಹ ತಾತ್ವಿಕ ತಳಹದಿಯನ್ನು ನಿರ್ಮಾಣ ಮಾಡುವ ಅಗತ್ಯವಿದೆ ಎಂದರು.
ಇಂದು ಸಂವಿಧಾನದ ಬಗ್ಗೆ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ನಾವೆಲ್ಲರೂ ಜವಾಬ್ದಾರಿಯಿಂದ ಆ ಕಾರ್ಯಕ್ರಮವನ್ನು ನೆರವೇರಿಸಬೇಕಿದ್ದು, ಇಲ್ಲವಾದಲ್ಲಿ ನಮಗೆ ನಾವೇ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ಸಂವಿಧಾನದ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಚರ್ಚೆಗಳು ನಡೆದಿವೆ. ಸಂವಿಧಾನವನ್ನು ಉಳಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ, ಸಂವಿಧಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ತಿದ್ದುಪಡಿ ಮಾಡಬಹುದು, ಸಂವಿಧಾನವನ್ನು ಪೂರ್ಣವಾಗಿ ಬದಲಾಯಿಸಲು ಈ ದೇಶದ ಪ್ರಜ್ಞಾವಂತ ಪ್ರಜೆಗಳು ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧೀಜಿ ಒಂದು ಬೊಗಸೆಯಲ್ಲಿ ಉಪ್ಪನ್ನು ಎತ್ತಿ ಹಿಡಿದರು, ಅಂಬೇಡ್ಕರ್ ಅವರು ನೀರನ್ನು ಎತ್ತಿ ಹಿಡಿದರು, ಸ್ವಾತಂತ್ರ್ಯದ ನಂತರ ಕಳೆದ ವರ್ಷ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿ ಅಂಬೇಡ್ಕರ್ ಅವರಿಗೆ ಧಿಕ್ಕಾರ ಕೂಗಿದರು, ಅದೇ ರೀತಿ ಈ ವರ್ಷದ ಆರಂಭದಲ್ಲಿ ಗಾಂಧೀಜಿಯವರ ಭಾವಚಿತ್ರವನ್ನು ಇಟ್ಟು, ಗೋಡ್ಸೆ ಗಾಂಧೀಜಿಯನ್ನು ಕೊಂದ ರೀತಿಯನ್ನು ಅಣುಕು ಪ್ರದರ್ಶನ ಮಾಡಲಾಯಿತು. ಈ ಘಟನೆಗಳನ್ನು ಗಮನಿಸಿದಾಗ ನಮ್ಮ ಮನಸ್ಸು ಎಷ್ಟು ವಿಕೃತವಾಗಿವೆ ಎಂಬುದನ್ನು ತಿಳಿಸುತ್ತದೆ. ಭಾರತ ದೇಶ ಇರುವವರೆಗೂ ಸಂವಿಧಾನ ಇರುತ್ತದೆ, ಹಾಗೆಯೇ ಸಂವಿಧಾನದ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರು ಸಹ ಅಜರಾಮರ ವಾಗಿರುತ್ತದೆ ಎಂದರು.
ಇನ್ನು ಭಾರತ ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಎಷ್ಟು ಚರ್ಚೆ ನಡೆದಿದೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿಯನ್ನು ಆಯಾ ಪಕ್ಷದ ವರಿಷ್ಠರು ಮೊದಲೇ ಘೋಷಣೆ ಮಾಡುವುದಾದರೆ, ಇದು ಸಂಸದೀಯ ಪ್ರಜಾಪ್ರಭುತ್ವ ಎಂದು ಹೇಗೆ ನಂಬಲು ಸಾಧ್ಯ? ಇದು ಅಧ್ಯಕ್ಷೀಯ ಪ್ರಜಾಪ್ರಭುತ್ವವಾಗಿದೆ, ಎಲ್ಲಾ ಏಕ ನಾಯಕತ್ವದ ಮನೋಧರ್ಮ ಸೃಷ್ಟಿಯಾಗಿದೆ. ಪ್ರಮಾಣವಚನ ಸ್ವೀಕಾರ ಮಾಡುವ ಮಂತ್ರಿಗಳು ಯಾವ ಯಾವ ಹೆಸರಿನಲ್ಲೋ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ, ಇದು ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರವಾಗಿದೆ. ಸಂಸದೀಯ ಪರಿಭಾಷೆಯನ್ನು ಯಾವ ರಾಜಕಾರಣಿಗಳು ಬಳಸುತ್ತಿಲ್ಲ, ಸತ್ಯಕ್ಕೆ ಸಾಕ್ಷಿ ಕೇಳುವ ಕಾಲ ಬಂದಿದ್ದು, ಭಾಷೆಯನ್ನು ಅತ್ಯಾಚಾರಗೊಳಿಸುತ್ತಿದ್ದಾರೆ ಎಂದು ರಾಜಕಾರಣಿಗಳ ವಿರುದ್ಧ ದೂರಿದರು.

Conclusion:ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊಫೆಸರ್ ಜಿಎಂ ಶ್ರೀನಿವಾಸಯ್ಯ ವಹಿಸಿಕೊಂಡಿದ್ದರು.
ನಂತರ ಸಂಸದೀಯ 'ಪ್ರಜಾಪ್ರಭುತ್ವ ಮತ್ತು ಸಂವಿಧಾನ', 'ಸಮಾನತೆ, ಜಾತ್ಯಾತೀತತೆ ಮತ್ತು ಸಂವಿಧಾನ', 'ಮೀಸಲಾತಿ ಮತ್ತು ಸಂವಿಧಾನ' ಎಂಬ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯದಿಂದ ರಾಜ್ಯದ ವಿವಿಧ ಭಾಗಗಳಿಂದ ಪ್ರಗತಿಪರ ಚಿಂತಕರು ಸಾಹಿತಿಗಳು ಪಾಲ್ಗೊಂಡಿದ್ದರು.

ವರದಿ
ಸುಧಾಕರ

For All Latest Updates

TAGGED:

Samvaada
ETV Bharat Logo

Copyright © 2024 Ushodaya Enterprises Pvt. Ltd., All Rights Reserved.