ತುಮಕೂರು : ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡು ಮಾಜಿ ಶಾಸಕ ಸುರೇಶ್ ಗೌಡ, ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿರುದ್ದ ಕೆಲಸ ಮಾಡುವ ಮೂಲಕ ಹಗೆ ತೀರಿಸಿಕೊಂಡಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುರೇಶ್ ಗೌಡ ತಮ್ಮ ಸಮುದಾಯದ ಪ್ರಬಲ ನಾಯಕರೆಂಬ ಕಾರಣಕ್ಕೆ ದೇವೇಗೌಡರನ್ನ ಬೆಂಬಲಿಸಿದ್ದಾರೆ, ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದರು.
ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿದ್ದು ಜಿ.ಪರಮೇಶ್ವರ್ ಎಂಬ ಸುರೇಶ್ ಗೌಡ ಹೇಳಿಕೆ ವಿಚಾರದಲ್ಲಿ ಹುರುಳಿಲ್ಲ. ಸುರೇಶ್ ಗೌಡ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಬಿಜೆಪಿ ಸೋಲಲು ಸುರೇಶ್ ಗೌಡ ಒಬ್ಬರೆ ಕಾರಣರಾಗ್ತಾರೆ ಎಂದು ಗುಡುಗಿದರು.