ತುಮಕೂರು : ಕೇಂದ್ರ ಸರ್ಕಾರ ವಿಡಿಎ ಮುಂದೂಡಿಕೆ, ಎಫ್‌ಟಿಇಗೆ ಅನುಮತಿ ಆದೇಶ ಮತ್ತು ಕಾರ್ಮಿಕ ಕಾನೂನು ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಖಂಡಿಸಿ ಜಿಲ್ಲಾ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿ ಎದುರು ಸಿಐಟಿಯು ಜೆಸಿಟಿಯು, ಸಂಘಟನೆಗಳು ಪ್ರತಿಭಟಿಸಿದವು.
ಈ ವೇಳೆ ಮಾತನಾಡಿದ ಸಿಐಟಿಯುನ ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ರಾಜ್ಯ ಸರ್ಕಾರ ಒಂದು ವರ್ಷದ ಕಾಲ ತುಟ್ಟಿಭತ್ಯೆ ನೀಡಬಾರದೆಂದು ಆದೇಶ ಹೊರಡಿಸಿದೆ. ಈ ಆದೇಶ ಹೊರಡಿಸುವ ಮೂಲಕ ಸರ್ಕಾರ ಮಾಲೀಕರ ಪರ ಆದೇಶ ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೂರಕ್ಕಿಂತ ಕಡಿಮೆ ಕಾರ್ಮಿಕರಿರುವ ಕಾರ್ಖಾನೆಯನ್ನು ಮುಚ್ಚುವ ಅವಕಾಶ ಇರುವುದರಿಂದ ಕಾರ್ಮಿಕರ ಸಂಖ್ಯೆಯನ್ನು 100 ರಿಂದ 300ಕ್ಕೆ ಹೆಚ್ಚಳ ಮಾಡಿದೆ. ಇದೆಲ್ಲವೂ ಕೊರೊನಾದ ನೆಪದಲ್ಲಿ ಕಾರ್ಖಾನೆಗಳ ಮಾಲೀಕರಿಗೆ ಉಡುಗೊರೆಯಾಗಿ ಸರ್ಕಾರಗಳು ನೀಡುತ್ತಿವೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.