ETV Bharat / state

ಬುದ್ಧಿಮಾಂದ್ಯ ಯುವತಿ ಅತ್ಯಾಚಾರ ಪ್ರಕರಣ: ಎಎಸ್​ಐ ಮೇಲಿನ ಆರೋಪ ಸಾಬೀತು!

ಬುದ್ಧಿಮಾಂದ್ಯ ಯುವತಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್​ಐ ಮೇಲಿನ ಆರೋಪ ಸಾಬೀತಾಗಿದ್ದು, ಜನವರಿ 31ರಂದು ಶಿಕ್ಷೆ ಪ್ರಕಟಗೊಳ್ಳಲಿದೆ.

Charges against Tumkur ASI, Charges against Tumkur ASI in dementia rape case, Tumkur Dementia rape case, Tumkur Dementia rape case judgement, ತುಮಕೂರು ಎಎಸ್​ಐ ಮೇಲಿನ ಆರೋಪ ಸಾಬೀತು, ಅತ್ಯಾಚಾರ ಪ್ರಕರಣದಲ್ಲಿ ತುಮಕೂರಿನಲ್ಲಿ ಎಎಸ್​ಐ ಮೇಲಿನ ಆರೋಪ ಸಾಬೀತು, ತುಮಕೂರು ಬುದ್ಧಿಮಾಂದ್ಯ ಯುವತಿ ಅತ್ಯಾಚಾರ ಪ್ರಕರಣ, ಬುದ್ಧಿಮಾಂದ್ಯ ಯುವತಿ ಅತ್ಯಾಚಾರ ತೀರ್ಪು,
ಎಎಸ್​ಐ ಮೇಲಿನ ಆರೋಪ ಸಾಬೀತು
author img

By

Published : Jan 29, 2022, 2:27 PM IST

ತುಮಕೂರು: ಸಹಾಯಕ ಪೊಲೀಸ್ ಸಬ್ ಇನ್ಸ್​ಪೆಕ್ಟರ್​ ಉಮೇಶಯ್ಯ ಮೇಲಿನ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣ ಪ್ರಕಟಗೊಳ್ಳಲಿದೆ.

ನಗರದ ಅಂತರಸನಹಳ್ಳಿ ಸೇತುವೆ ಬಳಿ 2017ರ ಜನವರಿ 15ರಂದು ರಾತ್ರಿ ಪಾಳಿಯಲ್ಲಿದ್ದ ಮಹಿಳಾ ಠಾಣೆಯ ಎಎಸೈ ಉಮೇಶಯ್ಯ ಹೋಗುತ್ತಿದ್ದ ವೇಳೆ ಬುದ್ಧಿಮಾಂಧ್ಯೆಯನ್ನು ಖಾಸಗಿ ಜೀಪಿನಲ್ಲಿ ಕೂರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಸಂತ್ರಸ್ತೆಯ ಪೋಷಕರು ಎಎಸ್ಐ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಓದಿ: ಸಿಎಂ ಭೇಟಿ ಮಾಡಿದ ಸಚಿವ ಉಮೇಶ್ ಕತ್ತಿ - ಸವದಿ ನೇತೃತ್ವದ ನಿಯೋಗ: ಗರಿಗೆದರಿದ ಬಣ ರಾಜಕೀಯ

ಪ್ರಕರಣ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೆಚ್ಎಸ್ ಮಲ್ಲಿಕಾರ್ಜುನಸ್ವಾಮಿ ಅವರು ಉಮೇಶಯ್ಯ ತಪ್ಪಿತಸ್ಥ ಎಂದು ಜನವರಿ 28ರಂದು ತೀರ್ಪು ನೀಡಿದ್ದಾರೆ.

ಜನವರಿ 31ರಂದು ಉಮೇಶಯ್ಯನಿಗೆ ನ್ಯಾಯಾಲಯ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿದೆ. ಸರ್ಕಾರಿ ಅಭಿಯೋಜಕಿ ಕವಿತಾ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಎರಡನೇ ಆರೋಪಿ ಖಾಸಗಿ ವಾಹನ ಚಾಲಕ ಈಶ್ವರ್​ನನ್ನು ನ್ಯಾಯಾಲಯ ಆರೋಪದಿಂದ ಮುಕ್ತಿಗೊಳಿಸಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.