ತುಮಕೂರು: ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಮೊಪೆಡ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧುಗಿರಿ ತಾಲೂಕಿನ ಕೆರೆಗಳ ಪಾಳ್ಯ ಬಳಿ ಸಂಭವಿಸಿದೆ.
ಮೃತರನ್ನು ಮಧುಗಿರಿ ತಾಲೂಕಿನ ಕಾವಾಡಿಗರ ಪಾಳ್ಯದ ಶಿವಣ್ಣ(48) ಹಾಗೂ ಮಧುಗಿರಿ ಪಟ್ಟಣದ ಬೀರಲಿಂಗಪ್ಪ (50) ಎಂದು ಗುರುತಿಸಲಾಗಿದೆ.
ಟಿವಿಎಸ್ ಮೊಪೆಡ್ನಲ್ಲಿ ಮಧುಗಿರಿಯಿಂದ ಕಾವಾಡಿಗರ ಪಾಳ್ಯಕ್ಕೆ ಹೋಗುವಾಗ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಈ ಸಂಬಂಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.