ತುಮಕೂರು: ಹೆರಿಗೆಗೆ ಬಂದ ಮಹಿಳೆಯ ಅಧಾರ್ ಕಾರ್ಡ್ ಇಲ್ಲದ ಕಾರಣ ಚಿಕಿತ್ಸೆಯನ್ನು ನಿರಾಕರಿಸಿದ್ದರಿಂದ ತಾಯಿ ಮತ್ತು ಮಗು ಸಾವನ್ನಪ್ಪಿರುವಂತಹ ಘಟನೆ ದೊಡ್ಡ ಕ್ರೌರ್ಯ ಎಂದು ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾನಾಯಕ್ ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿಯಲ್ಲಿ ಮಾತನಾಡಿದ ಅವರು ಇವರಿಗೆ ಆಧಾರ್ ಕಾರ್ಡ್ ಮುಖ್ಯವೇ ಅಥವಾ ಮನುಷ್ಯನ ಜೀವ ಮುಖ್ಯವೇ ಎಂದು ಪ್ರಶ್ನಿಸಿದರು. ತಾಯಿ ಮಗು ಸಾವಿಗೆ ಕಾರಣರಾದ ಆಸ್ಪತ್ರೆಯ ಮುಖ್ಯಸ್ಥರು ಮತ್ತು ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಲಲಿತಾನಾಯಕ್ ಒತ್ತಾಯಿಸಿದರು.
ರಾಜ್ಯದಲ್ಲಿ ಶೌಚಕ್ಕೆ ಹೋದ ಬಾಲಕಿಯರ ಮೇಲೆ ಅತ್ಯಾಚಾರವಾಗುತ್ತಿದೆ ಕೊಲೆಯಾಗುತ್ತಿದೆ. ಇದಕ್ಕೆ ಸರ್ಕಾರದ ಲೋಪವೇ ಕಾರಣ ಎಂದು ಆರೋಪಿಸಿದರು. ಸರ್ಕಾರ ಜನಪ್ರತಿನಿಧಿಗಳಿಗೆ ಜನರ ಸೇವೆ ಮಾಡಲು ವಾಹನ ಸೇರಿದಂತೆ ಅನೇಕ ಸೌಲಭ್ಯ ನೀಡುತ್ತಿದೆ. ಅದನ್ನ ಜನಸೇವೆಗೆ ಮಾತ್ರ ಬಳಸಬೇಕು ಹೊರತು ಮೋಜು ಮಸ್ತಿ ಮಾಡಲು ಬಳಸಬಾರದು ಎಂದು ಲಲಿತಾನಾಯಕ್ ತಿಳಿಸಿದರು.
ಜನರಿಗೆ ಉಚಿತವಾಗಿ ಯಾವುದನ್ನ ನೀಡಬಾರದು, ಸರ್ಕಾರಗಳು ಜನರಿಗೆ ಉಚಿತವಾಗಿ ನೀಡಿ ಅವರನ್ನ ಭಿಕ್ಷುಕರನ್ನಾಗಿ ಮಾಡಬಾರದು. ಪ್ರಜೆಗಳಿಗೆ ಶಿಕ್ಷಣ ಮತ್ತು ಆರೋಗ್ಯ ಉಚಿತವಾಗಿ ನೀಡಿದರೇ ಸಾಕು ಜನರು ಸುಶಿಕ್ಷಿತರಾಗುತ್ತಾರೆ ಎಂದು ಲಲಿತಾನಾಯಕ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಲಿಂಗ ಸಮಾನತೆ ಶಿಕ್ಷಣ ನೀಡಬೇಕು: ನಟ ಚೇತನ್