ETV Bharat / state

ತುಮಕೂರು ಜಿಲ್ಲೆಯಲ್ಲಿ ಸಾಗುತ್ತಿರುವ ಭಾರತ ಜೋಡೋ ಪಾದಯಾತ್ರೆ

ಮಂಡ್ಯ ಜಿಲ್ಲೆಯಲ್ಲಿ ಭರ್ಜರಿಯಾಗಿ ಸಾಗಿದ್ದ ಭಾರತ್​ ಜೋಡೋ ಪಾದಯಾತ್ರೆ ತುಮಕೂರು ಜಿಲ್ಲೆ ಪ್ರವೇಶಿಸಿದ್ದು, ಜಿಲ್ಲೆಯಲ್ಲಿ ರಾಹುಲ್​ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ಸಾಗುತಿದೆ.

bharat-jodo-padayathra-at-tumkur
ತುಮಕೂರು ಜಿಲ್ಲೆಯಲ್ಲಿ ಸಾಗುತ್ತಿರುವ ಭಾರತ ಜೋಡೋ ಪಾದಯಾತ್ರೆ
author img

By

Published : Oct 8, 2022, 3:41 PM IST

ತುಮಕೂರು : ಇಂದು ರಾಜ್ಯದಲ್ಲಿ ಏಳನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಪಾದಯಾತ್ರೆ ತುಮಕೂರು ಜಿಲ್ಲೆಯಲ್ಲಿ ಸಾಗುತ್ತಿದೆ. ಮೂರು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ಭರ್ಜರಿಯಾಗಿ ಸಾಗಿದ್ದ ಪಾದಯಾತ್ರೆ, ಮಂಡ್ಯದಲ್ಲಿ ಪಾದಯಾತ್ರೆ ಮುಗಿಸಿ ತುಮಕೂರು ಜಿಲ್ಲೆಯನ್ನು ಪ್ರವೇಶಿಸಿದೆ.

ಇಂದು ಬೆಳಗ್ಗೆ 6.30ಕ್ಕೆ ತುರುವೇಕೆರೆ ಕ್ಷೇತ್ರದ ಮಾಯಸಂದ್ರದ ಪೊಲೀಸ್ ಠಾಣೆ ಬಳಿಯಿಂದ ಆರಂಭವಾದ ಪಾದಯಾತ್ರೆ ಬೆಳಗ್ಗೆ 11 ಗಂಟೆಗೆ ಹರಳೀಕೆರೆ ಪಾಳ್ಯದ ಕಾಸ್ಮೋಪಾಲಿಟನ್ ಕ್ಲಬ್ ಬಳಿ ವಿಶ್ರಾಂತಿ ಪಡೆಯಿತು. ಭೋಜನ ವಿರಾಮದ ಬಳಿಕ ಸಂಜೆ ನಾಲ್ಕು ಗಂಟೆಗೆ ಪುನಾರಂಭ ಆಗಲಿರುವ ಯಾತ್ರೆ ರಾತ್ರಿ 7 ಗಂಟೆಗೆ ಹರಿದಾಸನಹಳ್ಳಿಗೆ ತಲುಪಲಿದೆ.

ತುಮಕೂರು ಜಿಲ್ಲೆಯಲ್ಲಿ ಸಾಗುತ್ತಿರುವ ಭಾರತ ಜೋಡೋ ಪಾದಯಾತ್ರೆ

ಕಾರ್ನರ್ ಮೀಟಿಂಗ್ ಮುಗಿದ ಬಳಿಕ ಬಾಣಸಂದ್ರದ ವಿಎಸ್‌ಎಸ್ ಜೂನಿಯರ್ ಕಾಲೇಜ್ ಬಳಿ ರಾಹುಲ್​ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ಇಂದು ತುಮಕೂರು ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಒಟ್ಟು 23 ಕಿಮೀ ಪಾದಯಾತ್ರೆ ನಡೆಸಲಿದ್ದಾರೆ. ಭಾರತ್ ಜೊಡೋ ಪಾದಯಾತ್ರೆಯಲ್ಲಿ ಕಾಣಿಸಿಕೊಂಡ ಜೆಡಿಎಸ್​ನಿಂದ ಉಚ್ಚಾಟಿತಗೊಂಡಿರುವ ಗುಬ್ಬಿ ಶಾಸಕ ಶ್ರೀನಿವಾಸ್​​​​ ರಾಹುಲ್ ಗಾಂಧಿಯನ್ನು ಸ್ವಾಗತಿಸಿದರು.

ಇದನ್ನೂ ಓದಿ : ಖರ್ಗೆ, ತರೂರ್​ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ: ರಾಹುಲ್ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.