ETV Bharat / state

ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿ ಬಿ ಸಿ ನಾಗೇಶ್ ಅಧಿಕಾರ ವಹಿಸಿಕೊಂಡಿಲ್ಲ ಯಾಕೆ?.. ಕಾರಣ ಅವ್ರೇ ಹೇಳಿದ್ರು.. - ಕಾರ್ಮಿಕರ ಕಲ್ಯಾಣ ಮಂಡಳಿ

ನನಗೆ ಇನ್ನೂ ಕಾರ್ಮಿಕ ಕಲ್ಯಾಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ಅಧಿಕಾರ ವಹಿಸಿಕೊಳ್ಳಲು ಆದೇಶ ಪತ್ರ ಬಂದಿಲ್ಲ. ಅದಕ್ಕಾಗಿ ಕಾಯುತ್ತಿದ್ದೇನೆ. ನನಗೆ ಪಕ್ಷ ಯಾವುದೇ ರೀತಿಯ ಅಧಿಕಾರ ಕೊಟ್ಟರೂ ಕೂಡ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ..

b c nagesh
ಶಾಸಕ ಬಿಸಿ ನಾಗೇಶ್
author img

By

Published : Dec 4, 2020, 5:18 PM IST

ತುಮಕೂರು : ಜಿಲ್ಲೆಯಲ್ಲಿ ಈಗಾಗಲೇ ಮೂವರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಆದರೆ, ತಿಪಟೂರು ಶಾಸಕ ಬಿ ಸಿ ನಾಗೇಶ್ ಮಾತ್ರ ಈವರೆಗೂ ಕಾರ್ಮಿಕ ಇಲಾಖೆ ಅಧೀನದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ ಸ್ಥಾನದ ಅಧಿಕಾರ ವಹಿಸಿಕೊಂಡಿಲ್ಲ.

ಶಾಸಕ ಬಿ ಸಿ ನಾಗೇಶ್ ಅಧಿಕಾರ ವಹಿಸಿಕೊಳ್ಳದಿರಲು ಕಾರಣವೇನು?

ತಿಪಟೂರು ಶಾಸಕ ಬಿ ಸಿ ನಾಗೇಶ್, ಶಿರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಎಸ್ ಆರ್ ಗೌಡ ಹಾಗೂ ಬಿ ಕೆ ಮಂಜುನಾಥರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಎಸ್‌ ಆರ್ ಗೌಡ ಅವರು ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷರಾಗಿ ಈಗಾಗಲೇ ಅಧಿಕಾರ ಸ್ವೀಕಾರಿಸಿದ್ದಾರೆ. ಅದೇ ರೀತಿ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿ ಕೆ ಮಂಜುನಾಥಗೌಡ ಅಧಿಕಾರ ವಹಿಸಿಕೊಂಡಿದ್ದಾರೆ. ಆದ್ರೆ, ಶಾಸಕ ಬಿ ಸಿ ನಾಗೇಶ್ ಅವರ ವಿಚಾರ ಈಗ ಜಿಲ್ಲೆಯಲ್ಲಿ ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

bc nagesh did not took charges of the chairman of workers welfare board
ಆದೇಶ ಪತ್ರ

ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೊದಲು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಆ ಸ್ಥಾನವನ್ನು ಬಿ ಸಿ ನಾಗೇಶ್ ನಿರಾಕರಿಸಿದ್ದರು. ಇದೀಗ ಕಾರ್ಮಿಕ ಕಲ್ಯಾಣ ಮಂಡಳಿ ಅಧ್ಯಕ್ಷ ಸ್ಥಾನವನ್ನು ಕೂಡ ಈವರೆಗೂ ವಹಿಸಿಕೊಳ್ಳದೆ ಇರುವುದು, ಅವರು ಪ್ರಬಲ ನಿಗಮ ಮಂಡಳಿ ಸ್ಥಾನ ಅಥವಾ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರಾ? ಎಂಬ ಚರ್ಚೆಗೆ ಆಹ್ವಾನ ಕೊಟ್ಟಂತಾಗಿದೆ.

ಈ ಸುದ್ದಿಯನ್ನೂ ಓದಿ: ಕೊರೊನಾ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಸಲಹೆ ಏನು?

ಜಿಲ್ಲೆಯಲ್ಲಿ ಹಿರಿಯ ಬಿಜೆಪಿ ನಾಯಕರಾಗಿಯೂ ಹಾಗೂ ಸಂಘಪರಿವಾರದ ಉತ್ತಮ ಸಂಪರ್ಕ ಇರುವಂತಹ ಬಿ ಸಿ ನಾಗೇಶ್, ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಈಗ ಬಿ ಎಸ್ ಯಡಿಯೂರಪ್ಪ ನೀಡಿರುವಂತಹ ಅವಕಾಶಕ್ಕಿಂತ ಉತ್ತಮ ಅವಕಾಶಕ್ಕಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿವೆ.

ಶಾಸಕ ಬಿ ಸಿ ನಾಗೇಶ್ ಸ್ಪಷ್ಟಣೆ : ಈ ಕುರಿತಂತೆ ಈಟಿವಿ ಭಾರತ ಜೊತೆ ಮಾತನಾಡಿರುವ ತಿಪಟೂರು ಶಾಸಕ ಬಿ ಸಿ ನಾಗೇಶ್, ನನಗೆ ಇನ್ನೂ ಕಾರ್ಮಿಕ ಕಲ್ಯಾಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ಅಧಿಕಾರ ವಹಿಸಿಕೊಳ್ಳಲು ಆದೇಶ ಪತ್ರ ಬಂದಿಲ್ಲ. ಅದಕ್ಕಾಗಿ ಕಾಯುತ್ತಿದ್ದೇನೆ.

ನನಗೆ ಪಕ್ಷ ಯಾವುದೇ ರೀತಿಯ ಅಧಿಕಾರ ಕೊಟ್ಟರೂ ಕೂಡ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನಾನು ಯಾವುದೇ ಸಚಿವ ಸ್ಥಾನ ಬೇಕೆಂದು ಪಕ್ಷದ ಮುಖಂಡರ ಬಳಿ ಒತ್ತಡ ಹೇರಿಲ್ಲ. ಕಾರ್ಮಿಕರ ಕಲ್ಯಾಣಕ್ಕಾಗಿ ಕೆಲಸ ಮಾಡುವಂತಹ ಆಸಕ್ತಿ ಕೂಡ ನನ್ನಲ್ಲಿದೆ. ಇದೊಂದು ಉತ್ತಮ ಅವಕಾಶ ಕೂಡ ಆಗಿದೆ. ನನಗೆ ಆದೇಶ ಪತ್ರ ಬಂದ ನಂತರ ಅಧಿಕಾರ ಸ್ವೀಕರಿಸುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.