ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ತೆಂಗಿನಮರ ಹಾಗೂ ಅಡಿಕೆ ಮರಗಳನ್ನು ಕಡಿದು ಹಾಕಲು ಶಾಸಕರ ಪತ್ನಿಯ ಕುಮ್ಮಕ್ಕು ಕಾರಣವೆಂದು ಸಂಸದ ಬಸವರಾಜ್ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಬ್ಬಿ ಶಾಸಕರ ಪತ್ನಿಯ ಸೂಚನೆ ಮೇರೆಗೆ ತಹಶೀಲ್ದಾರ್ 4 ಕಡೆ ತೋಟ ಕಡಿದು ಹಾಕಿಸಿದ್ದಾರೆ. ಗ್ರಾಮಲೆಕ್ಕಾಧಿಕಾರಿಗೆ ಹೇಳಿ ಮರಗಳನ್ನು ಕಡಿಸಿ ಹಾಕಲಾಗಿದೆ ಎಂದು ದೂರಿದರು.