ತುಮಕೂರು: ಇತ್ತೀಚೆಗೆ ಯುವಪೀಳಿಗೆ ಮೊಬೈಲ್ಗೆ ಗುಲಾಮರಾಗುತ್ತಿದ್ದಾರೆ. ಅದು ಬದಲಾಗಬೇಕು ಎಂದು ಒಲಿಂಪಿಕ್ನ ಕ್ರೀಡಾಪಟು ಅರ್ಜುನ್ ದೇವಯ್ಯ ಯುವಪೀಳಿಗೆಗೆ ಸಲಹೆ ನೀಡಿದರು.
ರನ್ ಫಾರ್ ಜಲ್ ಶಕ್ತಿ ಮತ್ತು ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಒಲಿಂಪಿಕ್ ಕ್ರೀಡಾಪಟು ಅರ್ಜುನ್ ದೇವಯ್ಯ ಚಾಲನೆ ನೀಡಿದರು. ಚಾಲನೆಗೂ ಮುನ್ನ ಮಾತನಾಡಿದ ಅವರು, ಜೀವನದಲ್ಲಿ ಸಾಧನೆ ಮಾಡಬೇಕೆಂದು ಯಾರು ಪಣ ತೊಡುತ್ತಾರೋ, ಅವರು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ. ಕನಸು ಕಾಣುವವರು ಕೇವಲ ಹಾಸಿಗೆಯ ಮೇಲೆ ಮಲಗಿರುತ್ತಾರೆ. ಎದ್ದು ಓಡಲು ಶುರು ಮಾಡಿದಾಗ ಮಾತ್ರ ಸಾಧನೆಯ ಜೀವನ ಪ್ರಾರಂಭವಾಗುತ್ತದೆ ಎಂದರು.
ಅನವಶ್ಯಕವಾಗಿ ಮೊಬೈಲ್ ಬಳಸುವುದರಿಂದ ಅದು ನಿಮ್ಮ ಏಕಾಗ್ರತೆಯನ್ನು ಹಾಳುಮಾಡುವುದರ ಜತೆಗೆ ನಿಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳುತ್ತದೆ. ಅದಕ್ಕೆ ನೀವು ಅಸ್ಪದ ನೀಡಬೇಡಿ ಎಂದು ಯುವಪೀಳಿಗೆಗೆ ಅರ್ಜುನ್ ದೇವಯ್ಯ ಸಲಹೆ ನೀಡಿದ್ರು.