ತುಮಕೂರು: ನಗರದ ಹನುಮಂತಪುರ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ನೆರೆಮನೆಯವರು ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಡಾವಣೆಯ 4ನೇ ಕ್ರಾಸ್ ನಲ್ಲಿ ಶಿವು ಎಂಬುವರ ಮನೆ ಮುಂದೆ ವಾಮಾಚಾರ ನಡೆಸಲಾಗಿದ್ದು, ನೆರೆಮನೆಯ ಮಹಿಳೆವೋರ್ವಳು ಈ ಕೃತ್ಯ ಎಸಗಿದ್ದಾಳೆ. ಅಲ್ಲದೇ ಇಂದು ಬೆಳಗ್ಗೆ ಮನೆ ಮುಂದೆ ವಾಮಾಚಾರ ಮಾಡುವಾಗ ರೆಡ್ ಹ್ಯಾಂಡ್ ಆಗಿ ಮಹಿಳೆ ಸಿಕ್ಕಿಬಿದ್ದಿದ್ದಾಳೆ ಎಂದು ಶಿವು ಎಂಬುವರು ಆರೋಪಿಸಿದ್ದಾರೆ.
ನಿನ್ನೆ ಶಿವು ಅವರ ಮಿಕ್ಸಿ ರಿಪೇರಿ ಅಂಗಡಿ ಮುಂದೆ ಕೂಡಾ ವಾಮಾಚಾರ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಮೊಟ್ಟೆ, ನಿಂಬೆ ಹಣ್ಣು, ತಾಮ್ರದ ವಸ್ತು, ಅರಿಶಿಣ, ಕುಂಕುಮ ಇಟ್ಟು ವಾಮಾಚಾರ ಮಾಡಲಾಗುತ್ತಿತ್ತು ಎಂದು ಅವರು ಶಿವು ದೂರಿದ್ದಾರೆ.
ಶಿವು ಹಾಗೂ ಮಹಿಳೆಯ ಮಕ್ಕಳ ನಡುವೆ ಜಗಳವಾಗಿತ್ತು. ಆ ಕಾರಣದಿಂದ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗ್ತಿದೆ.