ತುಮಕೂರು: ಜಿಲ್ಲೆಯಲ್ಲಿ ಇಂದು 132 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 18,326ಕ್ಕೆ ಏರಿಕೆಯಾಗಿದೆ.
ತಾಲೂಕುವಾರು ಕೋವಿಡ್ ಪ್ರಕರಣಗಳಿಷ್ಟು :
ತಿಟೂರು ತಾಲೂಕಿನಲ್ಲಿ 58, ಪಾವಗಡ ಮತ್ತು ತುಮಕೂರು ತಾಲೂಕಿನಲ್ಲಿ ತಲಾ 20, ಕೊರಟಗೆರೆ ಮತ್ತು ಶಿರಾ ತಾಲೂಕಿನಲ್ಲಿ ತಲಾ 12, ಮಧುಗಿರಿ ಮತ್ತು ಗುಬ್ಬಿ ತಾಲೂಕಿನಲ್ಲಿ ತಲಾ ಇಬ್ಬರಿಗೆ, ತುರುವೇಕೆರೆ ತಾಲೂಕಿನಲ್ಲಿ ಐವರಿಗೆ, ಕುಣಿಗಲ್ ತಾಲೂಕಿನಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿದೆ.
ಗುಣಮುಖ :
ಇಂದು 292 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಇದುವರೆಗೂ 16,026 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 1,917 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಪ್ರಕರಣಗಳು :
ಇಂದು ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 247 ಕ್ಕೆ ಏರಿಕೆಯಾಗಿದೆ.