ತುಮಕೂರು: ಜಿಲ್ಲೆಯಲ್ಲಿ ಇಂದು 265 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 16,750ಕ್ಕೆ ಏರಿಕೆಯಾಗಿದೆ.
ಇಂದಿನ ಕೋವಿಡ್ ಪ್ರಕರಣಗಳ ಮಾಹಿತಿ :
ತುಮಕೂರು ತಾಲೂಕಿನಲ್ಲಿ 128, ಪಾವಗಡ ತಾಲೂಕಿನಲ್ಲಿ 34, ಶಿರಾ ತಾಲೂಕಿನಲ್ಲಿ 23, ತಿಪಟೂರು ತಾಲೂಕಿನಲ್ಲಿ 20, ಗುಬ್ಬಿ ತಾಲೂಕಿನಲ್ಲಿ 15, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 11, ಕುಣಿಗಲ್ ತಾಲೂಕಿನಲ್ಲಿ 10, ಮಧುಗಿರಿ ಮತ್ತು ತುರುವೇಕೆರೆ ತಾಲೂಕಿನಲ್ಲಿ ತಲಾ 9 ಮಂದಿಗೆ, ಕೊರಟಗೆರೆ ತಾಲೂಕಿನಲ್ಲಿ ಆರು ಮಂದಿಗೆ ಸೋಂಕು ತಗುಲಿದೆ.
ಗುಣಮುಖ:
ಈ ದಿನ ಜಿಲ್ಲೆಯಲ್ಲಿ 290 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 13,905 ಜನರು ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 2,493 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತರ ಮಾಹಿತಿ :
ಇಂದು ಮೂವರು ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 238 ಏರಿಕೆಯಾಗಿದೆ.