ETV Bharat / state

ತುಮಕೂರಿನ 149 ಮಂದಿಗೆ ಸೋಂಕು ದೃಢ... ನಾಲ್ವರು ಬಲಿ! - ತುಮಕೂರು ಲೆಟೆಸ್ಟ್ ನ್ಯೂಸ್

ಸೋಂಕಿಗೆ ಜಿಲ್ಲೆಯ ನಾಲ್ವರು ಕೊನೆಯುಸಿರೆಳೆದಿದ್ದು 149 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4557 ಮತ್ತು ಮೃತರ ಸಂಖ್ಯೆ 143ಕ್ಕೆ ತಲುಪಿದೆ.

Tumkur covid positive cases
Tumkur covid positive cases
author img

By

Published : Aug 25, 2020, 7:25 PM IST

ತುಮಕೂರು: ಜಿಲ್ಲೆಯಲ್ಲಿ ಇಂದು 3 ಗರ್ಭಿಣಿಯರು ಹಾಗೂ 60 ವರ್ಷ ಮೇಲ್ಪಟ್ಟ 27 ಮಂದಿ ಸೇರಿದಂತೆ ಒಟ್ಟು 149 ಜನರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4557ಕ್ಕೆ ಏರಿಕೆಯಾಗಿದೆ. ಅಲ್ಲದೇ ಸೋಂಕಿಗೆ ತುತ್ತಾಗಿ ಇಂದು ನಾಲ್ವರು ಮೃತಪಟ್ಟಿದ್ದಾರೆ.

ತುಮಕೂರು ತಾಲೂಕಿನಲ್ಲಿ 37, ಪಾವಗಡ- 31, ಚಿಕ್ಕನಾಯಕನಹಳ್ಳಿ- 24, ತಿಪಟೂರು- 18, ತುರುವೇಕೆರೆ- 10, ಮಧುಗಿರಿ- 8, ಕುಣಿಗಲ್ ಮತ್ತು ಶಿರಾ ತಾಲೂಕಿನಲ್ಲಿ ತಲಾ 6, ಗುಬ್ಬಿ- 5, ಕೊರಟಗೆರೆ ತಾಲೂಕಿನಲ್ಲಿ 4 ಸೋಂಕು ಪ್ರಕರಣಗಳು ವರದಿಯಾಗಿದೆ. ಇಂದು ನಾಲ್ವರು ಸೋಂಕಿನಿಂದ ಕೊನೆಯುಸಿರೆಳೆದಿದ್ದು ಮೃತರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.

ಇಂದು 99 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ 3,353 ಜನರು ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 1,061 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.