ತುಮಕೂರು: ಜಿಲ್ಲೆಯಲ್ಲಿಂದು ಮಹಾಮಾರಿ ಸೋಂಕಿಗೆ ನಾಲ್ವರು ಬಲಿಯಾಗಿದ್ದು, ಮೃತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ ಹಾಗೂ 119 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇಂದು ಒಂದೇ ದಿನ 119 ಮಂದಿ ಸೋಂಕಿಗೆ ಒಳಗಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1110ಕ್ಕೆ ಏರಿಕೆಯಾಗಿದೆ. ಮೂವರು ಗರ್ಭಿಣಿಯರು, ಓರ್ವ ಪೊಲೀಸ್ ಇಂದು ಸೋಂಕಿಗೆ ಒಳಗಾಗಿದ್ದಾರೆ.
ತುಮಕೂರು ತಾಲೂಕಿನಲ್ಲಿ 49 ಮಂದಿ, ಚಿಕ್ಕನಾಯಕನಹಳ್ಳಿ ತಾಲೂಕು ಮತ್ತು ಪಾವಗಡ ತಾಲೂಕಿನಲ್ಲಿ ತಲಾ 13, ಮಧುಗಿರಿ ಮತ್ತು ತಿಪಟೂರು ತಾಲೂಕಿನಲ್ಲಿ ತಲಾ 9, ತುರುವೇಕೆರೆ ತಾಲೂಕಿನಲ್ಲಿ 5, ಶಿರಾ ತಾಲೂಕಿನಲ್ಲಿ ನಾಲ್ವರು, ಕೊರಟಗೆರೆ ತಾಲೂಕಿನಲ್ಲಿ 8, ಗುಬ್ಬಿ ತಾಲೂಕಿನಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿದೆ.
ಇನ್ನೂ ತುಮಕೂರು ತಾಲೂಕಿನ 20 ಮಂದಿ, ಕುಣಿಗಲ್ ಮತ್ತು ಮಧುಗಿರಿ ತಾಲೂಕಿನ ತಲಾ ಆರು ಮಂದಿ, ಚಿಕ್ಕನಾಯಕನಹಳ್ಳಿ ತಾಲೂಕಿನ ಐವರು, ಪಾವಗಡ ತಾಲೂಕಿನ ನಾಲ್ವರು ಸೇರಿದಂತೆ 43 ಮಂದಿ ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 595 ಮಂದಿ ಕೊರೊನಾ ಗೆದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ 473 ಮಂದಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.