ತುಮಕೂರು: ರಷ್ಯಾ- ಉಕ್ರೇನ್ ನಡುವೆ ಯುದ್ಧ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿ ತುಮಕೂರು ಜಿಲ್ಲೆಯ ಒಟ್ಟು 10 ವಿದ್ಯಾರ್ಥಿಗಳು ಸಿಲುಕಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಅಲ್ಲಿಗೆ ತೆರಳಿದ್ದರು. ಕಾರ್ಕೀವ್ ನಗರದಲ್ಲಿ ಈ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಯಾವುದೇ ತೊಂದರೆ ಇಲ್ಲದೇ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಂಬತ್ತನಹಳ್ಳಿಯ ಮಂಜುನಾಥ್ ಎಂಬುವರ ಮಕ್ಕಳಾದ ಸುಮಂತ್ ಕೆ.ಎಂ ಹಾಗೂ ಮಗಳು ರೂಪಶ್ರೀ ಕೆ.ಎಂ. ಉಕ್ರೇನ್ನಲ್ಲಿ ನ ಕಾರ್ಕೀವ್ ನಗರದಲ್ಲಿರುವ ಮೆಡಿಕಲ್ ಕಾಲೇಜಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸೈಬರ್ ಸೆಕ್ಯೂರಿಟಿಯು ರಾಷ್ಟ್ರೀಯ ಭದ್ರತೆಯ ವಿಷಯ : ಪ್ರಧಾನಿ ಮೋದಿ
ಇವರು ನಿನ್ನೆ ರಾತ್ರಿ 8 ಗಂಟೆಯ ವರೆಗೆ ಸಂಪರ್ಕದಲ್ಲಿದ್ದವರು, ಇದುವೆರ್ಗೂ ಸಂಪರ್ಕಕ್ಕೆ ಬಂದಿಲ್ಲ. ಪರಿಣಾಮ ಪೋಷಕರು ಆತಂಕದಲ್ಲಿದ್ದಾರೆ.
ಎಲ್ಲೆಡೆ ಬಾಂಬ್ ಬ್ಲಾಸ್ಟ್ ಆಗ್ತಿದೆ: ತುಮಕೂರು ಜಿಲ್ಲೆಯ ಪಾವಗಡ ಮೂಲದ ವೇಣು ಎಂಬುವವರು ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಸದ್ಯ ವಿಡಿಯೋ ಮೂಲಕ ಸಂದೇಶ ರವಾನೆ ಮಾಡಿದ್ದಾರೆ. ಇಲ್ಲಿ ಎಲ್ಲೆಡೆ ಬಾಂಬ್ ಬ್ಲಾಸ್ಟ್ ಆಗ್ತಿದೆ. ಆದ್ರೆ ನಾವು ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ. ಭಾರತೀಯ ರಾಯಭಾರಿ ಕಚೇರಿ ಜೊತೆಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿ ದೇಶಕ್ಕೆ ಬರುವಂತಹ ವ್ಯವಸ್ಥೆಯ ಕುರಿತಾಗಿ ಭರವಸೆ ದೊರೆತಿದೆ ಎಂದು ಹೇಳಿದ್ದಾರೆ.