ETV Bharat / state

'ಬಹರೇನ್​ನಿಂದ ದಾನ ಕೊಡಲಾಗಿರುವ ಆಕ್ಸಿಜನ್​ನಲ್ಲಿ 10 ಮೆಟ್ರಿಕ್ ಟನ್ ಜಿಲ್ಲೆಗೆ ಬರಲಿದೆ': ಸಚಿವ ಮಾಧುಸ್ವಾಮಿ - Tumakur

ಬಹರೇನ್​ನಿಂದ ಈಗಾಗಲೇ ದಾನ ಕೊಡಲಾಗಿರುವ ಆಕ್ಸಿಜನ್​ನಲ್ಲಿ 10 ಮೆಟ್ರಿಕ್ ಟನ್ ಜಿಲ್ಲೆಗೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Minister JC Madhuswamy
ಸಚಿವ ಜೆ.ಸಿ.ಮಾಧುಸ್ವಾಮಿ
author img

By

Published : May 10, 2021, 5:52 PM IST

ತುಮಕೂರು: ಜಿಲ್ಲೆಗೆ 24 ಕೆಎಲ್ ಆಕ್ಸಿಜನ್ ಅಗತ್ಯವಿದೆ. ಆದ್ರೆ ಪ್ರಸ್ತುತ 17 ಕೆಎಲ್ ಆಕ್ಸಿಜನ್ ಲಭ್ಯವಾಗುತ್ತಿದೆ. ಇನ್ನು 5 ಕೆಎಲ್ ನಷ್ಟು ಆಕ್ಸಿಜನ್ ಸರಬರಾಜು ಆದರೆ 300 ಹೆಚ್ಚುವರಿ ಬೆಡ್​ಗಳನ್ನು ಹಾಕಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಸಚಿವ ಜೆ.ಸಿ.ಮಾಧುಸ್ವಾಮಿ ..

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ 6 ರಿಂದ 7 ಕೆಎಲ್ ನಷ್ಟು ಆಕ್ಸಿಜನ್ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ 17 ಕೆಎಲ್ ಬಳಕೆಗೆ ತಲುಪಿದ್ದೇವೆ. ಬಹರೇನ್​ನಿಂದ ಈಗಾಗಲೇ ದಾನ ಕೊಡಲಾಗಿರುವ ಆಕ್ಸಿಜನ್​ನಲ್ಲಿ 10 ಮೆಟ್ರಿಕ್ ಟನ್ ಜಿಲ್ಲೆಗೆ ಬರಲಿದೆ ಎಂದರು.

6 ಕೆಎಲ್ ನಷ್ಟು ಆಕ್ಸಿಜನ್ ದೊರೆತರೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಅಲ್ಲಿರುವ ಬೇರೆ ವೈದ್ಯಕೀಯ ಸೌಲಭ್ಯಗಳನ್ನು ಶ್ರೀದೇವಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.