ತುಮಕೂರು : ಪೆರೋಲ್ ರಜೆಯ ಮೇಲೆ ಜೈಲಿನಿಂದ ಹೊರಗೆ ಬಂದ ಅಪರಾಧಿ ನಂತರ ಪರಪ್ಪನ ಅಗ್ರಹಾರಕ್ಕೆ ಮರಳದೆ ತಪ್ಪಿಸಿಕೊಂಡಿದ್ದಾನೆ. ಈಗ ಆತನನ್ನು ಹುಡುಕಿ ಕೊಟ್ಟವರಿಗೆ ಪೊಲೀಸ್ ಇಲಾಖೆ 1ಲಕ್ಷರೂ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.
ತಾಲೂಕಿನ ಅಮೃತೂರು ಹೋಬಳಿಯ ಸಂಕೇನಪುರದ ನಾರಾಯಣಗೌಡ ಎನ್ನುವ ಅಪರಾಧಿ ತಾಯಿ ಹುಚ್ಚಮ್ಮ ಅವರ ಅನಾರೋಗ್ಯದ ಕಾರಣ 2012ರ ಜುಲೈ 18ರಂದು ದಿನ ಪರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರು. ಆದರೆ, ಆತ ನಂತರ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಕೇಂದ್ರ ಕಾರಾಗೃಹದ ಡಿಐಜಿಪಿ ನೀಡಿದ ದೂರಿನ ಮೇರೆಗೆ 2014ರ ಫೆಬ್ರುವರಿಯಲ್ಲಿ ಪಟ್ಟಣ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಇದೇ ಪ್ರಕರಣದ ಸಂಬಂಧಿಸಿದಂತೆ ಅಪರಾಧಿ ನಾರಾಯಣಗೌಡನ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸ್ ಇಲಾಖೆ 1 ಲಕ್ಷರೂ ಬಹುಮಾನ ಘೋಷಿಸಿದೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 19 ವರ್ಷದ ಯುವಕ