ಹುಬ್ಬಳ್ಳಿ: ರೌಡಿಶೀಟರ್ ಫ್ರೂಟ್ ಇರ್ಫಾನ್ ಶೂಟೌಟ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶ್ವಸಿಯಾಗಿದ್ದಾರೆ. ಇರ್ಫಾನ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಮುಂಬೈ ಮೂಲದ ಇಬ್ಬರು ಶಾರ್ಪ್ ಶೂಟರ್ಗಳ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಪೊಲೀಸರು ರಾಜೇಂದ್ರ ರಾವತ್, ರಾಜು ನೇಪಾಳಿಯನ್ನು ಬಂಧಿಸಿದ್ದಾರೆ ಎಂದು ಹುಬ್ಬಳ್ಳಿ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 7ರಂದು ಹುಬ್ಬಳ್ಳಿಯಲ್ಲಿ ಮಗನ ಮದುವೆ ನಂತರ ಬೀಗರನ್ನು ಕಳುಹಿಸಿಕೊಡುತ್ತಿದ್ದಾಗ ಫ್ರೂಟ್ ಇರ್ಫಾನ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.
ಈಗಾಗಲೇ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಿರುವ ಹುಬ್ಬಳ್ಳಿ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಬಂಧಿತ ರಾಜೇಂದ್ರ ಮತ್ತು ರಾಜು ಎಂಬುವರು ಬಚ್ಚಾಖಾನ್ ಗ್ಯಾಂಗ್ನ ಸದಸ್ಯರಾಗಿದ್ದಾರೆ. ಅಲ್ಲದೆ ಹತ್ಯೆಗೆ ಬಳಸಿದ್ದ ಮೂರು ಪಿಸ್ತೂಲ್ ಸಹ ಮುಂಬೈನಿಂದಲೇ ಪೂರೈಕೆ ಆಗಿತ್ತು ಎಂಬ ವಿಚಾರ ತನಿಖೆ ವೇಳೆ ದೃಢಪಟ್ಟಿದ್ದು, ಬಂಧಿತ ಶೂಟರ್ಗಳನ್ನು ಹುಬ್ಬಳ್ಳಿಗೆ ಕರೆ ತಂದು ಮತ್ತಷ್ಟು ವಿಚಾರಣೆ ನಡೆಸಲು ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ.