ಚಿಕ್ಕಮಗಳೂರು: ಜಮೀನಿಗೆ ನುಗ್ಗುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ಮೂರು ಹಸುಗಳಿಗೆ ಹಲಸಿನ ಹಣ್ಣಿನಲ್ಲಿ ವಿಷ ಹಾಕಿ ತಿನ್ನಿಸಿ ಸಾಯಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಿಟ್ಟೆಗೌಡ, ಮಧು ಎಂಬುವರಿಗೆ ಸೇರಿದ ಮೂರು ದನಗಳು ಸಾವನ್ನಪ್ಪಿವೆ. ತೋಟಕ್ಕೆ ದನಗಳು ನುಗ್ಗುತ್ತವೆಂದು ವಿಷ ಹಾಕಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ.
ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.
ಹಲಸಿನ ಹಣ್ಣಿನಲ್ಲಿ ವಿಷ ಹಾಕಿ ಹಸುಗಳಿಗೆ ತಿನ್ನಿಸಿ ಸಾಯಿಸಿದ ದುರುಳರು - Basaravalli cow killed
ಕೇರಳದಲ್ಲಿ ಗರ್ಭಿಣಿ ಆನೆಯನ್ನು ಕೊಂದ ಪೈಶಾಚಿಕ ಕೃತ್ಯದ ನಂತರ ಕರುನಾಡಿನಲ್ಲಿಯೂ ಅಂಥದ್ದೆ ಘಟನೆ ವರದಿಯಾಗಿದೆ. ಹೊಲಕ್ಕೆ ನುಗ್ಗುತ್ತವೆ ಎಂಬ ಕಾರಣಕ್ಕೆ ಹಲಸಿನ ಹಣ್ಣಿನಲ್ಲಿ ವಿಷ ಹಾಕಿ ಹಸುಗಳಿಗೆ ತಿನ್ನಿಸಿ ಸಾಯಿಸಿದ ಮನಕಲುಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
Three cow killed by poisoning in chikkamagalore district