ETV Bharat / state

ಓದಿದ್ದು ಬಿಬಿಎಂ... ಹವ್ಯಾಸ ಮಾತ್ರ ಚಿತ್ರಕಲೆ... ಇದು ಈ ಯುವಕನ ಸಾಧನೆ - athani news

ಈ ವಿದ್ಯಾರ್ಥಿ ಓದಿದ್ದು ಬಿಬಿಎಂ ಆದರೆ, ಈತನ ಹವ್ಯಾಸ ಮಾತ್ರ ಚಿತ್ರಕಲೆ. 5 ರಿಂದ 10 ನಿಮಿಷದಲ್ಲಿ ಜಾಗೃತಿ ಚಿತ್ರಗಳನ್ನು ಬಿಡಿಸೋದು ಈತನಿಗೆ ಕರತಲಾಮಲಕ. ಅಥಣಿ ತಾಲೂಕಿನ ಪ್ರಶಾಂತ್ ಹೊನಖಾಂಡೆ ಎಂಬುವವರೇ ಈ ಕಲೆ ಮೈಗೂಡಿಸಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.

amateur-painting
ಬಿಬಿಎಂ ಓದಿ ಹವ್ಯಾಸಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡ ಅಥಣಿ ಯುವಕ
author img

By

Published : Jan 6, 2020, 9:56 AM IST

Updated : Jan 6, 2020, 1:18 PM IST

ಬಳ್ಳಾರಿ : ಓದಿದ್ದು ಬಿಬಿಎಂ.. ಆದರೆ ಈತನ ಹವ್ಯಾಸ ಮಾತ್ರ ಚಿತ್ರಕಲೆ. 5 ರಿಂದ 10 ನಿಮಿಷದಲ್ಲಿ ಜಾಗೃತಿ ಚಿತ್ರಗಳನ್ನು ಬಿಡಿಸೋದು ಈತನಿಗೆ ನೀರು ಕುಡಿದಷ್ಟೇ ಸಲೀಸು. ಇಂತಹ ಸಾಧನೆ ಮಾಡ್ತಿರುವವರು ಅಥಣಿ ತಾಲೂಕಿನ ಪ್ರಶಾಂತ್ ಹೊನಖಾಂಡೆ.

.. ಹವ್ಯಾಸ ಮಾತ್ರ ಚಿತ್ರಕಲೆ

ಬಾಲ್ಯದಲ್ಲೇ ಚಿತ್ರಕಲಾ ಶಿಕ್ಷಕರಾದ ಗಸ್ತಿ ಅವರು ಚಿತ್ರಕಲೆ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಅಂದಿನಿಂದ ಚಿತ್ರಕಲೆ ಆಸಕ್ತಿ ಬೆಳೆಸಿಕೊಂಡಿದ್ದು, ರಾಯಚೂರು, ಗುಲ್ಬರ್ಗ, ಬೆಂಗಳೂರು, ಬಳ್ಳಾರಿ, ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಚಿತ್ರ ಪ್ರದರ್ಶನ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದೇನೆ ಅಂತಾರೆ ಪ್ರಶಾಂತ್.

ಚಿತ್ರ ಬಿಡಿಸುವುದರಿಂದ ಮತ್ತು ಅವುಗಳನ್ನು ಪ್ರದರ್ಶನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಸಂತೋಷ ನೀಡುತ್ತದೆ ಅನ್ನುವ ಈ ಚಿತ್ರಕಲಾವಿದ, ಸಂಪಾದನೆಯ ದೃಷ್ಟಿಯಿಂದ ಈ ಕಲೆ ಪ್ರದರ್ಶನ ಮಾಡುತ್ತಿಲ್ಲ. ನನ್ನ ಕಲೆ ಸೃಜನಾತ್ಮಕವಾಗಿ ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳ್ತಾರೆ ಪ್ರಶಾಂತ್​.

ಶಾಹಪೂರದಲ್ಲಿ ಫೈನಲ್ ಕಂಪನಿಯಲ್ಲಿ ಕೆಲಸ ಮಾಡುವ ಇವರು, ಹವ್ಯಾಸಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಚಿತ್ರಕಲಾ ಪ್ರಕಾರಗಳಾದ ಗ್ರಾಫೈಟ್, ಆಯಿಲ್ ವರ್ಕ್, ಆಕ್ರಾಲಿಕ್, ಪೆನ್ಸಿಲ್ ವರ್ಕ್, ವಾಟಲ್ ಕಲರ್, ಚಾರ್ ಕೋಲ್, ಪೋಟ್ರೇಟ್ ವರ್ಕ್ ಗಳನ್ನು 5 ರಿಂದ10 ನಿಮಿಷಗಳಲ್ಲಿ ಬಿಡಿಸುವ ಸೃಜನಾತ್ಮ ಕಲೆ ಕರಗತ ಮಾಡಿಕೊಂಡಿದ್ದಾರೆ.

ವಿಶೇಷವಾಗಿ ರೋಹಿಣಿ ಸಿಂದೂರಿ, ಸಾಲುಮರದ ತಿಮ್ಮಕ್ಕ, ದೋನಿ, ಪುನಿತ್ ರಾಜ್ ಕುಮಾರ್, ರವಿ ಡಿ ಚನ್ನಣ್ಣನವ್ ಜೊತೆಗೆ ಹಲವಾರು ಸಾಮಾಜಿಕ ಕಳಜಿ, ಪ್ರಸ್ತುತ ಸನ್ನಿವೇಶಗಳು, ಪರಿಸರ ಜಾಗೃತಿ, ಚಿಕ್ಕ ಮಕ್ಕಳ ಮೊಬೈಲ್ ಬಳಕೆ, ಜಾಗೃತಿ ಚಿತ್ರಗಗಳನ್ನು ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.

Intro:kn_03_bly_050120_artistprasanthspl_ka10007

ಓದಿದ್ದು ಬಿ.ಬಿ.ಎಂ, ಆದ್ರೇ ಜಾಗೃತಿ ಚಿತ್ರಗಳನ್ನು 5 ರಿಂದ 10 ನಿಮಿಷದಲ್ಲಿ ಬಿಡಿಸುವ ಈ ಯುವಕ ಹವ್ಯಾಸಿ ಚಿತ್ರಕಲಾವಿದ.
ಒಮ್ಮೆ ನೋಡಿ ಈ ಯುವಕ ಕಲೆಯನ್ನು....!

Body:kn

ಬೆಳಗಾವಿ ಜಿಲ್ಲೆ ಅಥಿತಿ ತಾಲೂಕಿನಲ್ಲಿ ತಂದೆ ಬಸವಣ್ಣ
ತಾಯಿ ಶೋಭಾ ಅವರ ಪ್ರಥಮಮಗ ಈ ಪ್ರಶಾಂತ್ ಹೊನಖಾಂಡೆ. ಪ್ರಥಾಮಿಕ ಶಾಲೆಯಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಬಂದಿದೆ ಇದಕ್ಕೆ ಗಸ್ತಿ ಚಿತ್ರಕಲಾ ಶಿಕ್ಷಕ ಮಾರ್ಗದರ್ಶನ ಮಾಡಿದರು ಎಂದು ತಿಳಿಸಿದರು.

ಈಟಿವಿ ಭಾರತದೊಂದಿಗೆ ಬಳ್ಳಾರಿ ನಗರದ ಸೆಂಟರನರಿ ಹಾಲ್ ನಲ್ಲಿ ಮಾತನಾಡಿದ ಅವರು ಓದಿದ್ದು ಬಿ.ಬಿ.ಎಂ ನಂತರ ಶಹಪೂರದಲ್ಲಿ ಖಾಸಗಿ ಫೈನಸ್ಸ್ ನಲ್ಲಿ ಅಕೌಂಟ್ ಅಂಡ್ ಫೈನಸ್ಸ್ ನಲ್ಲಿ ಕೆಲಸ ಮಾಡುತ್ತಾರೆ. ಕಳೆದ 20 ವರ್ಷದ ಚಿತ್ರಕಲೆ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.

ಬಾಲ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಅಥಿಣಿಯಲ್ಲಿ ಓದಿತಿದ್ದಾಗ ಚಿತ್ರಕಲಾ ಶಿಕ್ಷಕರಾದ ಗಸ್ತಿ ಅವರ ಚಿತ್ರಕಲೆ ಬಗ್ಗೆ ಕಲಿಸಿ, ಮಾರ್ಗದರ್ಶನ ಮಾಡಿದರು. ಇದು ಇಲ್ಲಿಯವರೆಗೆ ಬೆಳೆದಿದ್ದೆನೆ ಎಂದು ತಿಳಿಸಿದರು.

ಶಾಹಪೂರದಲ್ಲಿ ಫೈನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಹವ್ಯಾಸವಾಗಿ ಚಿತ್ರಕಲೆಯಲ್ಲಿ ಇವರು ವಿವಿಧ ಚಿತ್ರಕಲಾ ಪ್ರಕಾರಗಳಾದ ಗ್ರಾಫೈಟ್, ಆಯಿಲ್ ವರ್ಕ್, ಆಕ್ರಾಲಿಕ್, ಪೆನ್ಸಿಲ್ ವರ್ಕ್, ವಾಟಲ್ ಕಲರ್, ಚಾರ್ ಕೋಲ್, ಪೋಟ್ರೇಟ್ ವರ್ಕ್ ಗಳನ್ನು 5, 10 ಮತ್ತು 15 ನಿಮಷಗಳಲ್ಲಿ ಬಿಡಿಸುವ ಸೃಜನಾತ್ಮ ಕಲೆಯನ್ನು ಹೊಂದಿದ್ದಾರೆ.

ಚಿತ್ರಕಲೆಯಲ್ಲಿ ವಿಶೇಷ ವ್ಯಕ್ತಿಗಳಾದ ರೋಹಿಣಿ ಸಿಂದೂರಿ , ಸಾಲುಮರದ ತಿಮ್ಮಕ್ಕ, ಮಹೇಂದತರ ಸಿಂಗ್ ದೋನಿ, ಪುನಿತ್ ರಾಜ್ ಕುಮಾರ್, ರವಿ ಡಿ ಚನ್ನಣ್ಣನವ್
ಜೊತೆಗೆ ಹಲವಾರು ಸಮಾಜಿಕ ಕಳಾಜಿ, ಪ್ರಸ್ತುತ ಸನ್ನಿವೇಶಗಳು, ಪರಿಸರ ಜಾಗೃತಿ, ಚಿಕ್ಕ ಮಕ್ಕಳ ಮೊಬೈಲ್ ಬಳಕೆ, ಜಾಗೃತಿ ಚಿತ್ರಗಳು 5 ರಿಂದ 15 ನಿಮಿಷದೊಳಗೆ ಬಿಡುವ ಕಲೆಯನ್ನು ಹೊಂದಿದ್ದಾರೆ ಈ ಪ್ರಶಾಂತ ಹೊನಖಾಂಡೆ.

ಪ್ರದರ್ಶನ ಮತ್ತು ಮಾರಾಟ :-

ರಾಜ್ಯದ ರಾಯಚೂರು, ಗುಲ್ಬರ್ಗ, ಬೆಂಗಳೂರು, ಬಳ್ಳಾರಿ ಮೂರು ಬಾರಿ ಪ್ರದರ್ಶನ, ಹಂಪಿ, ಹಾವೇರಿ, ಬಿಜಾಪುರ, ಬೆಳಗಾವಿ ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ, ಬೆಂಗಳೂರಿನಲ್ಲಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿ್್ದದ್ದೆನೆ ಎಂದು ತಿಳಿಸಿದರು.

ತಂತ್ರಜ್ಞಾನ ಜನರನ್ನು ಬದಲಿಸುವ ಕೆಲಸ ಮಾಡುತ್ತಿದ
ಆದ್ರೇ ಕಲೆ ಕಲೆಯಾಗಿ ಉಳಿಯುತ್ತದೆ ಎಂದು ತಿಳಿಸಿದರು.

ಹಿರಿಯರಿಂದ ಮತ್ತು ಸಾಂಸ್ಕೃತಿಕ ಬಂದ ಕಲೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಯುವಕರು ಯುವತಿಯರೆಲ್ಲಾ ಸೇರಿ ಮಾಡಬೇಕಾಗಿದೆ ಎಂದು ಪ್ರಶಾಂತ ತಿಳಿಸಿದರು.

Conclusion:ಒಟ್ಟಾರೆಯಾಗಿ ಚಿತ್ರಕಲೆ ಬಿಡಿಸುವುದು ಅದನ್ನು ಪ್ರದರ್ಶನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಸಂತೋಷ ನೀಡುತ್ತದೆ ಹಾಗೇ ಸಂಪಾದನೆಯ ದೃಷ್ಟಿಯಿಂದ ಈ ಕಲೆ ಪ್ರದರ್ಶನ ಮಾಡುತ್ತಿಲ್ಲ. ನನ್ನ ಕಲೆ, ಸೃಜನಾತ್ಮಕವಾಗಿ ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
Last Updated : Jan 6, 2020, 1:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.