ರಾಯಚೂರು: ಕೊರೊನಾ ಸೋಂಕು ತಗುಲಿದ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಪಿಪಿಇ ಧರಿಸಿಕೊಂಡು ಮತದಾನ ಮಾಡಿದರು.
ಜಿಲ್ಲೆಯ ಮಸ್ಕಿ ಪಟ್ಟಣದ ಜಿಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್‌ಗೆ ಬಂದು ತಮ್ಮ ಮತ ಹಕ್ಕು ಚಲಾಯಿಸಿದರು. ಅಲ್ಲದೇ ಅಭ್ಯರ್ಥಿಯಂತೆ ಇನ್ನುಳಿದ ಕೊರೊನಾ ಸೋಂಕಿತರು ಸಹ ಪಿಪಿಇ ಕಿಟ್ ಧರಿಸಿಕೊಂಡು ಬಂದು ಮತ ಚಲಾಯಿಸಿದರು.
ಬಿಜೆಪಿ ಅಭ್ಯರ್ಥಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗತ್ಯ ಮುನ್ನೆಚ್ಚರಿಕೆಯನ್ನು ಜಿಲ್ಲಾಡಳಿತ ಕೈಗೊಳ್ಳುವ ಮೂಲಕ ಕೊರೊನಾ ಸೋಂಕಿತರು ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿತ್ತು.