ಚಿಕ್ಕಮಗಳೂರು : ನಗರದಲ್ಲಿ ಯುವತಿಯೊರ್ವಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಬೆಂಗಳೂರಿನ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹೌಸಿಂಗ್ ಬೋರ್ಡ್ ನಗರದ ಯುವತಿ ಲಾಕ್ ಡೌನ್ ಸಡಿಲಿಕೆ ನಂತರ ಜಿಲ್ಲೆಗೆ ಬಂದಿದ್ದಳು. ಯುವತಿ ಶೀತ, ತಲೆನೋವು, ಜ್ವರದಿಂದ ಹಾಸಿಗೆ ಹಿಡಿದಿದ್ದರು ಎಂದು ಹೇಳಲಾಗುತ್ತಿದೆ.
ಸದ್ಯ ಯುವತಿಯ ತಂದೆ-ತಾಯಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಯುವತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸೋಂಕಿತಳ ತಾಯಿ ಸ್ಟಾಫ್ ನರ್ಸ್ ಆಗಿದ್ದು, ಪಕ್ಕದಲ್ಲೇ ಇರೋ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಯುವತಿಗೆ ರೋಗ ಲಕ್ಷಣಗಳು ಕಾಣಿಸಿಕೊಂಡ ಮೇಲೂ ಆಸ್ಪತ್ರೆಯಲ್ಲಿ ಅನೇಕ ರೋಗಿಗಳಿಗೆ ಯುವತಿಯ ತಾಯಿ ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಲ್ಲದೇ ಯುವತಿಯ ತಂದೆ ಅದೇ ಏರಿಯಾದಲ್ಲಿ ಕ್ಯಾಂಟಿನ್ ನಡೆಸಿಕೊಂಡಿದ್ದರು ಎನ್ನಲಾಗಿದೆ. ಇವರು ಕೂಡ ಅನೇಕ ಜನರನ್ನು ಭೇಟಿ ಮಾಡಿರೋದರಿಂದ ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಅನ್ನೋ ಭಯ ಸ್ಥಳೀಯ ಜನರಲ್ಲಿ ಕಾಡಲು ಪ್ರಾರಂಭವಾಗಿದೆ.
ಚಿಕ್ಕಮಗಳೂರು ಯುವತಿಗೆ ಕೋವಿಡ್: ಸ್ಥಳೀಯರಲ್ಲಿ ಮೂಡಿದ ಅತಂಕ - Corona virus updates
ಚಿಕ್ಕಮಗಳೂರು ಜಿಲ್ಲೆಯ ಯುವತಿಯೋರ್ವಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತಳ ಸಂಪರ್ಕ ಇತಿಹಾಸದಿಂದ ಸ್ಥಳೀಯರಲ್ಲಿ ಭೀತಿ ಮೂಡಿದೆ.