ಹಾವೇರಿ: ಜಿಲ್ಲೆಯಲ್ಲಿ ಇಂದು ಒಂದು ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.
ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ 60 ವರ್ಷದ ಮಹಿಳೆ ಸೋಂಕು ತಗುಲಿದೆ. ದಿನಾಂಕ 24 ರಿಂದ ಕೆಮ್ಮು ಮತ್ತು ಜ್ವರ ಬಂದ ಕಾರಣ, 25 ರಂದು ಮಹಿಳೆಯ ಸ್ವ್ಯಾಬ್ ಟೆಸ್ಟ್‌ಗೆ ಕಳಿಸಲಾಗಿತ್ತು, 27 ರಂದು ಮಹಿಳೆಯ ಸ್ವ್ಯಾಬ್ ಪರೀಕ್ಷೆಯ ಫಲಿತಾಂಶ ಬಂದಿದ್ದು ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಸದ್ಯ ಸೋಂಕಿತಳ ಮನೆಯ 100 ಮೀಟರ್ ಸುತ್ತಳತೆಯಲ್ಲಿ ಸೀಲ್ಡೌನ್ ಮಾಡಲಾಗಿದೆ. ಉಪ್ಪುಣಸಿ ಗ್ರಾಮವನ್ನ ಬಫರ್ ಜೋನ್ ಎಂದು ಘೋಶಿಸಲಾಗಿದೆ.
ಜಿಲ್ಲೆಗೆ ಸಂಬಂಧಪಟ್ಟ ಮೂವರಿಗೆ ಕೋವಿಡ್
ಈ ಮಧ್ಯೆ ಹಾವೇರಿ ಜಿಲ್ಲೆಗೆ ಸಂಬಂಧಿಸಿದ ಮೂರು ಪಾಸಿಟಿವ್ ಪ್ರಕರಣಗಳು ಬೇರೆ ಜಿಲ್ಲೆಯಲ್ಲಿ ವರದಿಯಾಗಿವೆ. ಸವಣೂರು ಮತ್ತು ಹಾವೇರಿ ಮೂಲದ ಇಬ್ಬರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ, ಬ್ಯಾಡಗಿ ಮೂಲದ ಒಬ್ಬರು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 70 ಕ್ಕೇರಿದಂತಾಗಿದೆ. ಇದರಲ್ಲಿ 25 ರೋಗಿಗಳು ಗುಣಮುಖರಾಗಿದ್ದು, 45 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಇಂದು ಒಂದು ಕೋವಿಡ್ ಪ್ರಕರಣ ಪತ್ತೆ
ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಗ್ರಾಮವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ.