ETV Bharat / state

ಇಳಿ ವಯಸ್ಸಲ್ಲಿ 2 ನೇ ಮದುವೆ ಆಸೆ: ಹಣ ಪಡೆದು ವೃದ್ಧನನ್ನು ಮಸಣಕ್ಕೆ ಕಳಿಸಿದ ಬ್ರೋಕರ್ಸ್​!

ವಯೋವೃದ್ಧನೋರ್ವ ಇಳಿ ವಯಸ್ಸಿನಲ್ಲಿ ಮದುವೆಯಾಗಲು ಮುಂದಾದಾಗ ನಡೆಯಬಾರದ ಘಟನೆ ನಡೆದು ಹೋಗಿದೆ. ಹುಡುಗಿ ಹುಡುಕಿ ಕೊಡಿ ಹೋಗಿದ್ದ ವೃದ್ಧ ಬ್ರೋಕರ್​ಗಳಿಂದಲೇ ಕೊಲೆಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

old man murder
ಕೊಲೆಯಾದ ವೃದ್ಧ
author img

By

Published : Jan 26, 2020, 10:17 PM IST

Updated : Jan 26, 2020, 10:59 PM IST

ಚಿತ್ರದುರ್ಗ: ಇಳಿ ವಯಸ್ಸಿನಲ್ಲಿ ಮದುವೆ ಆಗಲು ಬಯಸಿದ ವೃದ್ಧನೋರ್ವನ ಜೀವನವೇ ದುರಂತ ಅಂತ್ಯ ಕಂಡಿದೆ. ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದಿದ್ದ 70ರ ಪ್ರಾಯದ ತಾತ ಬ್ರೋಕರ್​ಗಳಿಂದಲೇ ಕೊಲೆಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ತಾಲೂಕಿನ ಭೀಮಸಮುದ್ರ ಗ್ರಾಮದ ತಿಮ್ಮಣ್ಣ ಎಂಬ 70 ವರ್ಷದ ವೃದ್ಧ ಹೆಣ್ಣು ಹುಡುಕಿಕೊಡಿ ಎಂದು ಬ್ರೋಕರ್​ಗಳಿಗೆ ಹಣ ಕೊಟ್ಟು ಅವರಿಂದಲೇ ಹತ್ಯೆಯಾಗಿದ್ದಾನೆ. ಕೊಲೆಯಾದ ತಿಮ್ಮಣ್ಣನಿಗೆ ಈಗಗಾಲೇ ಮದುವೆಯಾಗಿತ್ತು. ಮೊದಲ ಪತ್ನಿ ಸಾವನ್ನಪ್ಪಿದ್ದರಿಂದ ಇಳಿ ವಯಸ್ಸಿನಲ್ಲಿ ಮತ್ತೆ ಎರಡನೇ ಮದುವೆಯಾಗಲು ಚಿತ್ರದುರ್ಗ ಮೂಲದ ಬ್ರೋಕರ್​ಗಳಾದ ಅಜಯ್ ಹಾಗೂ ನಾಗರಾಜ್ ಎಂಬುವರಿಗೆ ಎರಡು ಲಕ್ಷ ರೂಪಾಯಿ ಹಣ ಕೊಟ್ಟು ಹೆಣ್ಣು ಹುಡುಕಿ ಕೊಡುವಂತೆ ಕೋರಿದ್ದ ಎಂದು ಹೇಳಲಾಗ್ತಿದೆ.

ಬ್ರೋಕರ್​ಗಳು ಸಮಯಕ್ಕೆ ಸರಿಯಾಗಿ ಹುಡುಗಿಯನ್ನು ಹುಡುಕಿ ಕೊಡದಿದ್ದಕ್ಕೆ ತಿಮ್ಮಣ್ಣ ತನ್ನ ಹಣವನ್ನು ಹಿಂದುರಿಗಿಸುವಂತೆ ದಬಾಯಿಸಿದ್ದನಂತೆ. ಇನ್ನು ತಿಮ್ಮಣ್ಣನ ಕಿರುಕುಳದಿಂದ ಆಕ್ರೋಶಗೊಂಡ ಬ್ರೋಕರ್​ಗಳಾದ ನಾಗರಾಜ್ ಹಾಗೂ ಅಜಯ್‌ ತಮ್ಮೊಂದಿಗೆ ಇನ್ನಿಬ್ಬರನ್ನು ಸೇರಿಸಿಕೊಂಡು ಈತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಬಳಿಕ ಹೊಸದುರ್ಗದಲ್ಲಿ ಹೆಣ್ಣು ಸಿಕ್ಕಿದೆ, ಮದುವೆಗೆ ರೆಡಿಯಾಗಿ ಬರುವಂತೆ ಹೇಳಿದ ದಿನವೇ ಆ ವೃದ್ಧನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂದು ಎಸ್​ಪಿ ಡಾ. ಅರುಣ್​ ಮಾಹಿತಿ ನೀಡಿದ್ದಾರೆ.

ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರು ಅಜಯ್, ಕಿರಣ್ ಸೇರಿದಂತೆ ನಾಗರಾಜ್ ಎಂಬ ಹೆಸರಿನ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Intro:ವಯೋ ವೃದ್ಧ ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದಾ...ಬ್ರೋಕರ್ ಗಳಿಂದ ಕೊಲೆಯಾದ

ಆ್ಯಂಕರ್:- ವಯೋವೃದ್ಧ ನೊರ್ವ ಇಳಿ ವಯಸ್ಸಿನಲ್ಲಿ ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದು ಬ್ರೋಕರ್ ಗಳಿಂದಲೇ ಕೊಲೆಯಾಗಿರುವ ಘಟನೆಗೆ ಕೋಟೆನಾಡು ಚಿತ್ರದುರ್ಗ ಸಾಕ್ಷಿಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಗ್ರಾಮದ ತಿಮ್ಮಣ್ಣ ಎಂಬ ೭೦ ವರ್ಷದ ವಯೋವೃದ್ಧ ಹೆಣ್ಣು ಹುಡುಕಿಕೊಡಿ ಎಂದು ಬ್ರೋಕರ್ ಗಳಿಗೆ ಹಣ ಕೊಟ್ಟು ಬ್ರೋಕರ್ ಗಳಿಂದ ಹತ್ಯೆಯಾಗಿದ್ದಾನೆ. ಬ್ರೋಕರ್ ಗಳಿಂದ ಕೊಲೆಯಾದ ವಯೋವೃದ್ಧ ತಿಮ್ಮಣ್ಣನಿಗೆ ಈಗಗಾಲೇ ಮದುವೆಯಾಗಿ ಹೆಂಡತಿ ಸಾವನಪ್ಪಿದ್ದರಿಂದ ಇಳಿ ವಯಸ್ಸಿನಲ್ಲಿ ಎರಡನೇ ಮದುವೆಯಾಗಲು ಚಿತ್ರದುರ್ಗದ ಮೂಲದ ಬ್ರೋಕರ್ ಗಳಾದ ಅಜೆಯ್ ಹಾಗು ನಾಗರಾಜ್ ಎಂಬುವವರಿಗೆ ಎರಡು ಲಕ್ಷಹಣ ಕೊಟ್ಟು ಹೆಣ್ಣು ಹುಡುಗಿ ಹುಡುಕಿ ಕೊಡುವಂತೆ ಕೋರಿದ್ದನು. ಸಮಯಕ್ಕೆ ಸರಿಯಾಗಿ ವಯೋವೃದ್ಧ ತಿಮ್ಮಣ್ಣನಿಗೆ ಹುಡುಗಿ ಸಿಗದ ಕಾರಣ ಮೃತ ತಿಮ್ಮಣ್ಣ ಹುಡುಗಿ ಹುಡುಕಿಕೊಟ್ಟಿಲ್ಲದಿದ್ದರೆ ಹಣ ಹಿಂದುರಿಗಿಸಿ ಎಂದು ಬ್ರೋಕರ್ ಗಳಿಬ್ಬರಿಗೆ ದಬಾಯಿಸಿದ್ದಾ. ತಿಮ್ಮಣನ ಕಿರುಕುಳದಿಂದ ಆಕ್ರೋಶಗೊಂಡ ಬ್ರೋಕರ್ ಗಳಾದ ನಾಗರಾಜ್ ಹಾಗು ಅಜಯ್‌ತನ್ನೊಂದಿಗೆ ಇನ್ನೊಬ್ಬರನ್ನು ಸೇರಿಸಿಕೊಂಡು ಈತನನ್ನು ಕೊಲೆಮಾಡಲು ಸಂಚು ರೂಪಿಸಿದ ಬಳಿಕ ಹೊಸದುರ್ಗದಲ್ಲಿ ಹೆಣ್ಣು ಸಿಕ್ಕಿದ್ದೂ,ರೆಡಿಯಾಗಿ ಬರುವಂತೆ ಹೇಳಿದ ದಿನವೇ ಆ ವೃದ್ಧನನ್ನು ಕೊಲೆ ಮಾಡಿದ್ದರು. ಪ್ರಕರಣವನ್ನು ಬೆನ್ನತ್ತಿದ್ದ ಹೊಸದುರ್ಗ ಪೋಲಿಸರು ಅಜಯ್,ನಾಗರಾಜ್,ಕಿರಣ್ ಹಾಗು ನಾಗರಾಜ್ ಎಂಬ ನಾಲ್ವರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸದುರ್ಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಫ್ಲೋ......

ಬೈಟ್01:- ಡಾ ಅರುಣ್,‌ಎಸ್ಪಿBody:70 years murderConclusion:Avb
Last Updated : Jan 26, 2020, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.