ಹಾವೇರಿ: ರಾಣೆಬೆನ್ನೂರು ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕರ್ನಾಟಕ ವೈಭವದ ವೈಚಾರಿಕ ಹಬ್ಬಕ್ಕೆ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಉದ್ಘಾಟನೆ ಮಾಡಿದರು.
ನಂತರ ಆಶೀರ್ವಚನ ನೀಡಿ ಮಾತನಾಡಿದ ಅವರು, ನಮ್ಮ ಭಾರತೀಯ ಪರಂಪರೆಯಲ್ಲಿ ಮೌನ, ಶಾಂತಿ, ಮಂತ್ರವನ್ನು ಮೌನದ ಮುಖಾಂತರ ವಿದ್ಯೆ ಜ್ಞಾನವನ್ನು ಸುಲಭವಾಗಿ ಸಂಪಾದಿಸಬಹುದು. ಮೌನ ಇಲ್ಲದಿದ್ದರೆ ಶಾಂತಿ ಸಹನೆ ಸ್ಥಾಪಿತವಾಗುವುದಿಲ್ಲ. ಸಾಮಾಜಿಕ ಪ್ರಜ್ಞೆಯನ್ನು ಬೆಳಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.