ETV Bharat / state

ಮೂರು ದಿನಕ್ಕೆ ಕಲಾಪ ಮುಗಿಸುವ ಚರ್ಚೆ ನಡೆದಿದೆ, ಅಂತಿಮವಾಗಿಲ್ಲ: ನಾರಾಯಣಗೌಡ

author img

By

Published : Sep 21, 2020, 12:22 PM IST

ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವೆಲ್ಲವನ್ನು ಪರಿಹರಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಮೂರು ದಿನಕ್ಕೆ ಸದನ ಮುಗಿಸುವ ಚರ್ಚೆ ನಡೆದಿದ್ದು, ಅಂತಿಮವಾಗಿಲ್ಲ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

ನಾರಾಯಣ ಗೌಡ
ನಾರಾಯಣ ಗೌಡ

ಬೆಂಗಳೂರು: ಮೂರು ದಿನಕ್ಕೆ ಸದನ ಮುಗಿಸುವ ಚರ್ಚೆ ನಡೆದಿದೆ. ಆದರೆ ಇನ್ನೂ ಚಿಂತನೆಯಲ್ಲಿದೆ, ಅಂತಿಮವಾಗಿಲ್ಲ ಎಂದು ಸಚಿವ ನಾರಾಯಣಗೌಡ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವೆಲ್ಲವನ್ನು ಪರಿಹರಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಬಹಳ ಮೃದುವಾಗಿ ಸದನವನ್ನು ನಡೆಸುತ್ತೇವೆ. ಪ್ರತಿಪಕ್ಷಗಳು ಇರೋದು ಹೋರಾಟ ಮಾಡೋಕೆ. ಹಾಗಾಗಿ ಅವರ ಕೆಲಸ ಅವರು ಮಾಡ್ತಾರೆ. ಸದನದಲ್ಲಿ ಅವರ ಹೋರಾಟಕ್ಕೆ ಉತ್ತರ ಕೊಡ್ತೇವೆ ಎಂದರು.

ಹೆಚ್.ವಿಶ್ವನಾಥ್‌ ಅಸಮಾಧಾನ ವಿಚಾರದ ಕುರಿತು ಮಾತನಾಡಿ, ನಮ್ಮ ರಾಷ್ಟ್ರೀಯ ನಾಯಕರು ಇದ್ದಾರೆ. ಅವರು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರಿಗೂ ಅವರು ಅವಕಾಶ ಮಾಡಿಕೊಡ್ತಾರೆ. ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗುತ್ತದೆ. ವಿಶ್ವನಾಥ್ ಅವರಿಗೆ ಎಲ್ಲೂ ಅಸಮಾಧಾನವಿಲ್ಲ. ಹೇಳಿದಂತೆ ಎಲ್ಲರಿಗೂ ಅವಕಾಶ ಸಿಕ್ಕೇ ಸಿಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.