ETV Bharat / state

ರಸ್ತೆ ಅಗಲೀಕರಣಕ್ಕೆ ಪ್ರತಿರೋಧ: ಅಂಗಡಿ ಮಾಲೀಕರ ಮನವೊಲಿಸಿದ ಶಾಸಕ ವೇದವ್ಯಾಸ ಕಾಮತ್ - ಶಾಸಕ ವೇದವ್ಯಾಸ್ ಕಾಮತ್

ರಸ್ತೆ ಅಗಲೀಕರಣ ಕಾಮಗಾರಿಗೆ ತೊಡಕಾಗಿದ್ದ ಅಂಗಡಿಗಳ ಮಾಲೀಕರ ಜೊತೆ ಚರ್ಚೆ ನಡೆಸಿ, ಅವರ ಮನವೊಲಿಸಿ ಸ್ಥಳ ಪಡೆದು ಶಾಸಕ ವೇದವ್ಯಾಸ್ ಕಾಮತ್ ಕಾಮಗಾರಿ ನಿರ್ವಿಘ್ನವಾಗಿ ನಡೆಯುವಂತೆ ಮಾಡಿದ್ದಾರೆ.

Mangalore road Widening problem saloved
Mangalore road Widening problem saloved
author img

By

Published : Jun 25, 2020, 10:18 PM IST

ಮಂಗಳೂರು: ರಸ್ತೆ ಕಾಮಗಾರಿಗೆ ಅಡ್ಡವಾಗಿದ್ದ ಅಂಗಡಿಗಳ ಮಾಲೀಕರ ಮನವೊಲಿಸಿ ಸ್ಥಳ ಪಡೆಯುವಲ್ಲಿ ಶಾಸಕ ವೇದವ್ಯಾಸ್ ಕಾಮತ್ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಅಂಗಡಿ ಮಾಲೀಕರ ವಿರೋಧದಿಂದ ನಗರದ ಕ್ಲಾಕ್ ಟವರ್ ನಿಂದ ವಿಜಯ ಪೆನ್ ಮಾರ್ಟ್ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿಗೆ ತೊಡಕಾಗಿತ್ತು. ಆದರೆ ಇಂದು ಶಾಸಕ ವೇದವ್ಯಾಸ್ ಕಾಮತ್ ಅವರು ಅಂಗಡಿ ಮಾಲೀಕರ ಮನವೊಲಿಸಲು ಮಾತುಕತೆ ನಡೆಸಿದ್ದು, ಮಾಲೀಕರು ಜಾಗ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಈ ರಸ್ತೆ ಅಗಲೀಕರಣ ಕಾಮಗಾರಿಗೆ ಸ್ಥಳೀಯ ಅಂಗಡಿ ಮಾಲೀಕರು ಜಾಗ ಬಿಟ್ಟುಕೊಡದಿರುವುದು ತೊಡಕಾಗಿತ್ತು.

ಅದರೆ ಇಂದು ಶಾಸಕ ವೇದವ್ಯಾಸ್ ಕಾಮತ್, ‌ಮನಪಾ ಸದಸ್ಯೆ ಪೂರ್ಣಿಮಾ ಹಾಗೂ ಅಧಿಕಾರಿಗಳೊಂದಿಗೆ ತೆರಳಿ ಅಂಗಡಿ ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅಂಗಡಿ ಮಾಲೀಕರು ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡಲು ಒಪ್ಪಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.