ETV Bharat / state

ಬಿಬಿಎಂಪಿ ಅಧಿಕಾರಿಗಳ ಮಹತ್ವದ ಸಭೆ: ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ

ವಾರ್ಡ್​ಗಳಲ್ಲಿ ಕಂಡುಬರುವ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಗೌರವ್ ಗುಪ್ತಾ ಇಂದು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚಿಸಿದರು.

Bbmp
Bbmp
author img

By

Published : Oct 2, 2020, 12:47 PM IST

ಬೆಂಗಳೂರು: ಬಿಬಿಎಂಪಿಯ ಎಲ್ಲಾ ವಿಭಾಗದ ಮುಖ್ಯಸ್ಥರ ಜೊತೆ ಗೌರವ್ ಗುಪ್ತಾ ಇಂದು ಸಭೆ ನಡೆಸಿ 198 ವಾರ್ಡ್​ಗಳಲ್ಲಿ ಪ್ರಮುಖವಾಗಿ ರಸ್ತೆ ಗುಂಡಿ ಸಮಸ್ಯೆ, ವಿದ್ಯುತ್ ದೀಪ ಅಳವಡಿಕೆ, ಕಸ ಸುರಿಯುವ ಸ್ಥಳಗಳ ತೆರವು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದರು.

ವಾರ್ಡ್​ಗಳಲ್ಲಿ ಯಾವುದಾದರು ಸಮಸ್ಯೆ ಇದ್ದರೆ ಆ ಸಮಸ್ಯೆ ನಿವಾರಣೆ ನನ್ನ ಜವಾಬ್ದಾರಿಯಲ್ಲ ಎಂದು ಯಾವೊಬ್ಬ ಅಧಿಕಾರಿಯೂ ಸುಮ್ಮನಿರಬಾರದು. ಇರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು. ವಾರ್ಡ್​ಗಳಲ್ಲಿ ಕಂಡುಬರುವ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು. ಎಲ್ಲವನ್ನು ಕಂಪ್ಯೂಟರೀಕರಣಗೊಳಿಸುವ ಮೂಲಕ ಸಾರ್ವಜನಿಕರಿಗೂ ಮಾಹಿತಿ ಲಭ್ಯವಾಗುವಂತೆ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಪಾಲಿಕೆಯ 198 ವಾರ್ಡ್​ಗಳಲ್ಲಿ ಸಮನ್ವಯತೆಯಿಂದ ಕೆಲಸ ಮಾಡಲು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಆಯಾ ವಾರ್ಡ್​ಗೆ ನಿಯೋಜನೆ ಮಾಡಿರುವ ನೋಡಲ್ ಅಧಿಕಾರಿಗಳು ವಾರಕ್ಕೆ 3 ಬಾರಿ ವಾರ್ಡ್ ಪರಿವೀಕ್ಷಣೆ ನಡೆಸಬೇಕು. ಜೊತೆಗೆ ಆಯಾ ವಾರ್ಡ್​ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಬೆಸ್ಕಾಂ, ಜಲಮಂಡಳಿ, ಪೊಲೀಸ್ ಹಾಗೂ ಆರ್.ಡಬ್ಲ್ಯೂ.ಎಗಳ ಜೊತೆ ಕಡ್ಡಾಯವಾಗಿ ತಿಂಗಳ ಮೊದಲನೇ ಶನಿವಾರ ಹಾಗೂ ಮೂರನೇ ಶನಿವಾರ ವಾರ್ಡ್ ಸಮಿತಿ ಸಭೆ ನಡೆಸಬೇಕು ಎಂದರು.

ರಸ್ತೆ ಇತಿಹಾಸ ವರದಿ ಸಿದ್ಧಪಡಿಸಲು ಸೂಚನೆ:

ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ರಸ್ತೆಗಳ ಇತಿಹಾಸ ವರದಿಯನ್ನು ಸಿದ್ಧಪಡಿಸಬೇಕು. ಈಗಾಗಲೇ ಎಲ್ಲಾ ರಸ್ತೆಗಳನ್ನು ಜಿ.ಐ.ಎಸ್ ಮ್ಯಾಪಿಂಗ್ ಮಾಡಲಾಗಿದೆ. ಆದರೆ ಯಾರ ಬಳಿಯೂ ಸಮರ್ಪಕವಾದ ಮಾಹಿತಿ ಲಭ್ಯವಿಲ್ಲ. ಈ ಸಂಬಂಧ ಎಲ್ಲಾ ರಸ್ತೆಗಳ ಸಮರ್ಪಕ ರಸ್ತೆ ಇತಿಹಾಸ ವರದಿಯನ್ನು ಸಿದ್ಧಪಡಿಸಬೇಕು. ಒಮ್ಮೆ ನಕ್ಷೆ ನೋಡಿದರೆ ಪಾಲಿಕೆ ವ್ಯಾಪ್ತಿಯಲ್ಲಿರುವ ರಸ್ತೆಗಳು, ಯಾವ ರಸ್ತೆಯಲ್ಲಿ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಯಾವ ಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ, ರಸ್ತೆ ನಿರ್ವಹಣಾ ವರದಿ, ಡಿ.ಎಲ್.ಪಿ ಅವಧಿ, ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಇನ್ನು ಆರ್.ಆರ್ ನಗರ ಚುನಾವಣೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಯುಕ್ತರು, 4 ಲಕ್ಷದ 61 ಜನ ಮತದಾರರು ಇದ್ದಾರೆ. ಪ್ರತೀ ಮತಗಟ್ಟೆಗಳಲ್ಲಿ 1,000ಕ್ಕೂ ಹೆಚ್ಚು ಮತಗಳು ಇರಬಾರದು ಅನ್ನುವ ನಿಯಮವಿದೆ. ಹಾಗಾಗಿ ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲಾಗುವುದು. ಒಟ್ಟು 681 ಮತಗಟ್ಟೆಗಳಲ್ಲಿ ಮತದಾನ ನಡೆಯುವುದು. ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿ ಜೊತೆಗೆ ಒಬ್ಬರಿಗೆ ಮಾತ್ರ ಅವಕಾಶ ಇದ್ದು, ಪ್ರತೀ ಮತದಾರರಿಗೂ ಗ್ಲೌಸ್ ನೀಡಲಾಗುತ್ತದೆ. ಗ್ಲೌಸ್ ಹಾಕಿಕೊಂಡೇ ಮತದಾನ ಮಾಡಬೇಕು. ಚುನಾವಣಾ ಪ್ರಚಾರದ ಬಗ್ಗೆ ಅಭ್ಯರ್ಥಿ ಸೇರಿ ಕೇವಲ ನಾಲ್ಕು ಜನ ಮಾತ್ರ ಮನೆ ಮನೆ ಪ್ರಚಾರ ಮಾಡಬೇಕು. 200 ಜನರಿಗಿಂತ ಹೆಚ್ಚು ಜನ ಸೇರುವಂತಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.