ETV Bharat / state

ಆಕ್ಸಿಜನ್ ಕೊರತೆ ಸಾವಿನ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸುವೆ : ಕೆ ಎಸ್ ಈಶ್ವರಪ್ಪ

ಜಿಲ್ಲೆಯಲ್ಲಿ ಲಸಿಕೆ ಕೊರತೆ ಇಲ್ಲ. ಆದರೂ ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸುವೆ ಎಂದರು. ಲಸಿಕೆ ಬರುವುದನ್ನು ನೋಡಿ ಟೋಕನ್ ನೀಡಲಾಗುತ್ತಿದೆ..

I will talk about chamarajanagar incident in cabinet meeting

author img

By

Published : May 3, 2021, 3:36 PM IST

ಶಿವಮೊಗ್ಗ : ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ ಪ್ರಕರಣದ ಕುರಿತು ನಾಳಿನ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚೆ ನಡೆಸುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 24 ಮಂದಿ ಸಾವಿನ ಪ್ರಕರಣ ನಿಜಕ್ಕೂ ಆಘಾತಕಾರಿ. ನಾಳೆ ಮುಖ್ಯಮಂತ್ರಿ ವಿಶೇಷ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಸಭೆಯಲ್ಲಿ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದಿದ್ದಾರೆ.

ಹೋದಂತಹ ಜೀವಗಳ ಬಗ್ಗೆ ಬಹಳ ಸೀರಿಯಸ್ ಆಗಬೇಕಿದೆ. ಈ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ಪಡೆದಿದ್ದೇನೆ. ಮೈಸೂರಿನಿಂದ ಸರಬರಾಜು ಆಗಬೇಕಿದ್ದ ಆಕ್ಸಿಜನ್‌ನಲ್ಲಿ ಲ್ಯಾಪ್ಸ್ ಆಗಿದೆ.

ಈ ರೀತಿ ಎಂದೂ ಆಗಬಾರದು. ಒಬ್ಬ ವ್ಯಕ್ತಿಯ ತಪ್ಪಿನಿಂದಾಗಿ ಇಷ್ಟೊಂದು ಜನರ ಸಾವಾಗಿರುವುದು ಅರ್ಥವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಲಸಿಕೆ ಸದ್ಯಕ್ಕೆ ಕೊರತೆ ಇಲ್ಲ : ಜಿಲ್ಲೆಯಲ್ಲಿ ಲಸಿಕೆ ಕೊರತೆ ಇಲ್ಲ. ಆದರೂ ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸುವೆ ಎಂದರು. ಲಸಿಕೆ ಬರುವುದನ್ನು ನೋಡಿ ಟೋಕನ್ ನೀಡಲಾಗುತ್ತಿದೆ.

ಈಗಾಗಲೇ, ಜನರಿಗೆ ಯಾವ ದಿನಾಂಕದಂದು ಬರಬೇಕೆಂದು ಟೋಕನ್ ನೀಡಲಾಗುತ್ತಿದೆ. ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.