ETV Bharat / state

ಅಯ್ಯೋ ದುರ್ವಿಧಿಯೇ.. ಆರತಕ್ಷತೆ ಸಂದರ್ಭದಲ್ಲೇ ಕುಸಿದು ಬಿದ್ದ ವರ ಸಾವು! - ಆರತಕ್ಷತೆ ನಡೆಯುತ್ತಿರುವವಾಗ ಕುಸಿದು ಬಿದ್ದು ಮದುಮಗ ಸಾವು

ಆರತಕ್ಷತೆ ನಡೆಯುತ್ತಿರುವವಾಗಲೇ ಕುಸಿದು ಬಿದ್ದ ಮದುಮಗ- ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಾಗ ಹಾರಿಹೋಯ್ತು ಪ್ರಾಣ- ಮದುವೆ ಮನೆಯಲ್ಲಿ ಸೂತಕ

groom-collapses-during-reception-and-died-at-vijayanagara
ವಿಜಯನಗರ: ಆರತಕ್ಷತೆ ನಡೆಯುತ್ತಿರುವಾಗಲೇ ಕುಸಿದು ಬಿದ್ದು ವರ ಸಾವು
author img

By

Published : Jul 21, 2022, 1:04 PM IST

Updated : Jul 21, 2022, 5:18 PM IST

ವಿಜಯನಗರ: ಮದುವೆ ಆರತಕ್ಷತೆ ಸಂದರ್ಭದಲ್ಲೇ ಹೃದಯಾಘಾತದಿಂದ ವರ ಮೃತಪಟ್ಟ ಮನಕಲಕುವ ದುರ್ಘಟನೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗ್ರಾಮದ ಹೊನ್ನೂರಸ್ವಾಮಿ (26) ಮೃತ ಮದುಮಗ.

ವಿವಾಹ ಆರತಕ್ಷತೆ ಕಾರ್ಯಕ್ರಮದ ವೇಳೆ ವರ ಹೊನ್ನೂರಸ್ವಾಮಿಗೆ ಎದೆ ನೋವು ಕಾಣಿಸಿಕೊಂಡು ದಿಢೀರ್​​ ಕುಸಿದುಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಲೋ ಬಿಪಿ ಇದ್ದುದರಿಂದ ತಕ್ಷಣ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದರು. ಆದರೆ ಮಾರ್ಗಮಧ್ಯೆಯೇ ಹೊನ್ನೂರಸ್ವಾಮಿ ಮೃತಪಟ್ಟಿದ್ದಾರೆ.

ಬುಧವಾರ ಸಂಜೆ ಆರತಕ್ಷತೆ ಬಳಿಕ ಇಂದು(ಗುರುವಾರ) ವಿವಾಹ ಸಮಾರಂಭ ನಡೆಯಬೇಕಿತ್ತು. ಆದರೆ ವರನ ಸಾವಿನಿಂದ ಮದುವೆ ಮನೆಯಲ್ಲಿ ಸೂತಕ ಆವರಿಸಿದೆ.

ಇದನ್ನೂ ಓದಿ: ತವರು ಮನೆಗೆ ಹೋಗ್ತಿದ್ದಾಗ ಗರ್ಭಿಣಿಗೆ ಡಿಕ್ಕಿ ಹೊಡೆದ ಟ್ರಕ್​​.. ಮಗುವಿಗೆ ಜನ್ಮ ನೀಡಿ ಪ್ರಾಣಬಿಟ್ಟ ಮಹಿಳೆ

Last Updated : Jul 21, 2022, 5:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.