ಬೆಂಗಳೂರು: ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಅದರ ರಕ್ಷಣೆಗಾಗಿ ಸರ್ಕಾರದೊಂದಿಗೆ ಸಮಾಜವು ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಕರೆ ನೀಡಿದರು.
ಸಂಜೀವಿನಿ ನಗರದಲ್ಲಿ ಟಿ. ಜೆ. ಸಂಜೀವಿನಿ ಟ್ರಸ್ಟ್ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮನೆಗೆರಡು ಸಸಿ ನೆಟ್ಟು ಬೆಳೆಸಬೇಕು. ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಪರಿಸರ ಸಂರಕ್ಷಣೆಗಾಗಿ ಸರ್ಕಾರದೊಂದಿಗೆ ಸಮಾಜವೂ ಶ್ರಮಿಸಬೇಕು ಎಂದರು.
ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಾವು ಬಳುವಳಿಯಾಗಿ ನೀಡಬೇಕು. ನೀರನ್ನು ಮಿತವಾಗಿ ಬಳಸಿ, ಸ್ವಚ್ಛತೆಯನ್ನು ಕಾಪಾಡಿ, ಗಿಡ ಮರಗಳನ್ನು ಬೆಳೆಸಿದರೆ ಪರಿಸರವನ್ನು ಸಂರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಪ್ರಕೃತಿ ಸಂರಕ್ಷಣೆಗೆ ಸರ್ಕಾರದ ಜೊತೆ ಸಮಾಜವು ಶ್ರಮಿಸಬೇಕು: ಡಿಸಿಎಂ ಗೋವಿಂದ ಕಾರಜೋಳ - Dcm govinda karajola
ಮನೆಗೆರಡು ಸಸಿ ನೆಟ್ಟು ಬೆಳೆಸಬೇಕು. ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಪರಿಸರ ಸಂರಕ್ಷಣೆಗಾಗಿ ಸರ್ಕಾರದೊಂದಿಗೆ ಸಮಾಜವೂ ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಹೇಳಿದರು.