ಕುಷ್ಟಗಿ (ಕೊಪ್ಪಳ) : ತಾಲೂಕಿನ ಕೆ. ಹೊಸೂರು ಗ್ರಾಮದಿಂದ ಎಂ. ಗುಡದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಅಭಿವೃದ್ಧಿಪಡಿಸಿದ ಕೆಲವೇ ತಿಂಗಳಲ್ಲಿ ಡಾಂಬರ್ ಕಿತ್ತು ಹೋಗಿ ಹದಗೆಟ್ಟಿದೆ.
ಮಳೆಗಾಲ ಆರಂಭವಾಗಿದ್ದು, ಮಳೆ ನೀರಿಗೆ ರಸ್ತೆ ಮತ್ತಷ್ಟು ಹದಗೆಟ್ಟು ಸಂಚಾರ ದುಸ್ತರಗೊಳ್ಳಲಿದ್ದು ರಸ್ತೆ ದುರಸ್ತಿ ಮಾಡಿಯೂ ಮಾಡಿಸದಂತಾಗಿದೆ ಎನ್ನುವುದು ಉಭಯ ಗ್ರಾಮಸ್ಥರು ಮಾತು.
ಲೋಕೋಪಯೋಗಿ ಇಲಾಖೆಯು 1ಕಿಮೀಗೆ 34ಲಕ್ಷ ರೂ. ವೆಚ್ಚ ಮಾಡಿ ಈ ರಸ್ತೆ ಕಾಮಗಾರಿ ನಡೆಸಿತ್ತು. ನಿಯಮಾನುಸಾರ ಕಾಮಗಾರಿ ಕೈಗೊಳ್ಳದಿರುವುದೇ ರಸ್ತೆ ಹದಗೆಡಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕ್ರಿಯಾಯೋಜನೆ ಪ್ರಕಾರ ಒಂದು ಕಡೆ ಮಾತ್ರ ಸಿಡಿ ನಿರ್ಮಿಸಬೇಕಿತ್ತು. ರಸ್ತೆ ಅಕ್ಕ ಪಕ್ಕದ ಜಮೀನಿನ ರೈತರು ಒತ್ತಡ ಹೇರಿದ್ದರಿಂದ ಹೆಚ್ಚುವರಿ 6 ಸಿಡಿ ನಿರ್ಮಿಸಿ 18 ಪೈಪ್‌ಗಳನ್ನು ಅಳವಡಿಸಲಾಗಿದೆ.
ಡಾಂಬರೀಕರಣಕ್ಕೆ ಮೀಸಲಿಟ್ಟ ಅನುದಾನ ಹೆಚ್ಚುವರಿ ಸಿಡಿ ನಿರ್ಮಾಣಕ್ಕೆ ಖರ್ಚಾಗಿದ್ದರಿಂದ ಹೀಗಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಭೀಮಸೇನರಾವ್ ವಜ್ರಬಂಡಿ ತಿಳಿಸಿದ್ದಾರೆ.
ಕಾಮಗಾರಿ ಮುಗಿದ ಕೆಲವೇ ತಿಂಗಳಲ್ಲಿ ಕಿತ್ತು ಹೋದ ರಸ್ತೆ - Kustagi taluk road development
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ. ಹೊಸೂರು ಗ್ರಾಮದಿಂದ ಎಂ. ಗುಡದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಿದ ಕೆಲವೇ ತಿಂಗಳಲ್ಲಿ ಡಾಂಬರ್ ಕಿತ್ತು ಹಾಳಾಗಿದ್ದು ಸಂಚಾರ ವ್ಯವಸ್ಥೆ ಹದಗೆಟ್ಟಿದೆ.