ಬೆಂಗಳೂರು: ಎಲ್ಲಾ ಸಚಿವರು ತಮ್ಮ ಇಲಾಖೆಯ ಒಂದು ವರ್ಷದ ಸಾಧನೆಯ ಕಿರುಹೊತ್ತಿಗೆಯನ್ನು ಹೊರತರುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿದ ಬೆನ್ನಲ್ಲೇ ಅಬಕಾರಿ ಇಲಾಖೆಯ ವರ್ಷದ ಸಾಧನಾ ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಅಬಕಾರಿ ಸಚಿವ ಹೆಚ್.ನಾಗೇಶ್ ಭೇಟಿ ನೀಡಿ, ಇಲಾಖೆಯ ವರ್ಷದ ಸಾಧನೆ ಕುರಿತು ಹೊರತರಲಾಗಿರುವ ಕಿರುಹೊತ್ತಿಗೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಿದರು. ಸಾಧನಾ ಹೊತ್ತಿಗೆ ಸ್ವೀಕರಿಸಿದ ಸಿಎಂ ಅಧಿಕೃತವಾಗಿ ಬಿಡುಗಡೆ ಮಾಡಿದರು.
ಅಬಕಾರಿ ಇಲಾಖೆಗೆ ಲಾಕ್ ಡೌನ್ ಕಾರಣದಿಂದ ಆದಾಯ ಕಡಿತಗೊಂಡಿದ್ದು, ವರ್ಷದ ವಹಿವಾಟು, ಇಲಾಖೆಯ ಪ್ರಗತಿ ಇತ್ಯಾದಿಗಳ ಅಂಕಿ ಅಂಶಗಳನ್ನು ಕಿರುಹೊತ್ತಿಗೆಯಲ್ಲಿ ವಿವರಿಸಲಾಗಿದೆ.
ಹೊತ್ತಿಗೆ ಬಿಡುಗಡೆ ಮಾಡಿದ ನಂತರ ಮಾತನಾಡಿದ ಸಿಎಂ, ಕೆಲ ಇಲಾಖೆಗಳು ವರ್ಷದ ಸಾಧನಾ ಪುಸ್ತಕ ಹೊರ ತಂದಿರುವುದು ಸ್ವಾಗತಾರ್ಹ. ಉಳಿದ ಇಲಾಖೆಯ ಸಚಿವರು ತಮ್ಮ ಇಲಾಖೆಯ ವರ್ಷದ ಸಾಧನೆ ಪುಸ್ತಕ ಹೊರತರಬೇಕು ಎಂದರು.