ಬೆಂಗಳೂರು: ಮೋಹನ್ ದಾಸ್ ಪೈ ರಸ್ತೆ ಸರಿಯಿಲ್ಲ ಎಂದು ಟ್ವಿಟ್ ಮಾಡಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ರಸ್ತೆಗಳು ಎಲ್ಲವೂ ಇಂಪ್ರೂ ಆಗಿದೆ. ಇನ್ನೂ ಆಗುತ್ತಿದೆ, ಮಳೆಗಾಲವಿತ್ತು ಹೀಗಾಗಿ ತೊಂದರೆಯಾಗಿತ್ತು. 1 ತಿಂಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡುತ್ತೇವೆ. ನಾನು ಮೋಹನ್ ದಾಸ್ ಪೈ ಜೊತೆನೂ ವೈಯಕ್ತಿಕವಾಗಿ ಮಾತನಾಡುತ್ತೇನೆ. ಬರುವಂತಹ ದಿನಗಳಲ್ಲಿ ದೊಡ್ಡ ಪ್ರಮಾಣದದಲ್ಲಿ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೊರ ರಾಜ್ಯಗಳಿಂದ ಬೆಂಗಳೂರಿನ ಐಟಿ- ಬಿಟಿ ಕಂಪನಿಗಳಿಗೆ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯಿಸಿ, ತಮಿಳುನಾಡಿನವರು ಸಾಕಷ್ಟು ಹತಾಶರಾಗಿದ್ದಾರೆ. ತಮಿಳುನಾಡಿಗೆ ಹೋಲಿಕೆ ಮಾಡೋದಷ್ಟೇ ಅಲ್ಲ, ಬೇರೆ ಯಾವುದೇ ರಾಜ್ಯಕ್ಕೂ ನಮ್ಮ ಬೆಂಗಳೂರನ್ನು ಹೋಲಿಕೆ ಮಾಡಬಾರದು. ನಾವು ನಮ್ಮ ರಾಜ್ಯದ ಬಗ್ಗೆ ಒಳ್ಳೆಯದೇನಿದೆಯೋ ಅದನ್ನು ಹೇಳಿ ಇನ್ವೆಸ್ಟ್ ಮಾಡಲು ಕರೆಯಬೇಕು. ಇನ್ನೊಂದು ರಾಜ್ಯವನ್ನ ತೆಗಳಿ ಕರೆಯುವ ಅವಶ್ಯಕತೆ ಇಲ್ಲ ಎಂದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಬೈಕ್-ಬಸ್ ಅಪಘಾತ: ವಾಹನಗಳಿಗೆ ಬೆಂಕಿ, ಓರ್ವನಿಗೆ ಗಾಯ
ಪಕ್ಕದ ರಾಜ್ಯದಿಂದ ಬನ್ನಿ ಎಂದು ಕರೆಯುತ್ತಿದ್ದರೆ ಅದರ ಅರ್ಥ ಅಲ್ಲಿಗೆ ಯಾರೂ ಬರ್ತಿಲ್ಲ ಅಂತ. ಅವರ ವೀಕ್ನೆಸ್ ಅದು. ನಮ್ಮಲ್ಲಿ ಬರುವಂತ ದಿನಗಳಲ್ಲಿ ಇನ್ನಷ್ಟು ಹೂಡಿಕೆ ರಾಜ್ಯಕ್ಕೆ ಬರಲಿದೆ. ಸ್ಟಾರ್ಟ್ ಅಪ್ನಲ್ಲಿ ಸಾಕಷ್ಟು ಕಂಪನಿಗಳು ಬರುತ್ತಿದೆ. ಕರ್ನಾಟಕದ ಪ್ರಗತಿಯನ್ನು ಯಾರೂ ನಿಲ್ಲಿಸೋದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು. ಹಿಂದಿ ಹೇರಿಕೆಗೆ ಅವಕಾಶ ಕೊಡಲ್ಲ ಅಂತಾ ಸಿದ್ದರಾಮಯ್ಯ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಸಿದ್ದರಾಮಯ್ಯನವರಿಗೆ ಯಾವಾಗ ಜ್ಞಾನೋದಯ ಆಗುತ್ತೋ ಗೊತ್ತಿಲ್ಲ ಎಂದು ತಿರುಗೇಟು ಕೊಟ್ಟರು.