ಚಿತ್ರದುರ್ಗ: ತೀವ್ರ ಉಸಿರಾಟದ ತೊಂದರೆ ಮತ್ತು ಸೋಂಕಿತ ಮತ್ತು ಶಂಕಿತ ಕೊರೊನಾ ಪ್ರಕರಣಗಳ ವರದಿಗಳನ್ನು ಸಲ್ಲಿಸದಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಯನ್ನು ರದ್ದುಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.
ಕೋವಿಡ್-19 ಕಾರ್ಯಕ್ರಮದಡಿಯಲ್ಲಿ ಇನ್‍ಫ್ಲೂಯೆಂಜಾ ಲೈಕ್ ಇಲ್‍ನೆಸ್ ಕೊರೊನಾ ಪ್ರಕರಣಗಳ ವರದಿಗಳನ್ನು ಆನ್‍ಲೈನ್‍ನಲ್ಲಿ ಪ್ರತಿ ದಿನ ದಾಖಲಿಸುವುದು ಅಗತ್ಯವಿರುತ್ತದೆ. ಆನ್‍ಲೈನ್‍ನಲ್ಲಿ ದಾಖಲಾತಿಯನ್ನು ಯಾವ ರೀತಿ ನೋಂದಣಿ ಮಾಡಬೇಕು ಎಂಬುದನ್ನು ಈಗಾಗಲೇ ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ (ಕ್ಲಿನಿಕ್, ನರ್ಸಿಂಗ್ ಹೋಂ, ಆಸ್ಪತ್ರೆ) ತರಬೇತಿಯನ್ನು ಮೇ 4ರಂದು ಜಾಗೃತಿ ಕರ್ನಾಟಕ ಯುಟ್ಯೂಬ್ ಚಾನೆಲ್‍ನ ವಿಡಿಯೋ ಕಾನ್ಫರೆನ್ಸ್ನಲ್ಲಿ ತಿಳಿಸಲಾಗಿದೆ.
ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಯವರಿಗೆ ವರದಿ ನೀಡಲು ಸೂಚಿಸಿದ್ದರೂ ಸಹ ಕೆಲವು ಸಂಸ್ಥೆಗಳು ಮಾತ್ರ ವರದಿ ಮಾಡುತ್ತಿವೆ. ಆದ್ದರಿಂದ ವರದಿ ಮಾಡದಿರುವ ವೈದ್ಯಕೀಯ ಸಂಸ್ಥೆಯವರು ಜರೂರಾಗಿ ದೈನಂದಿನ ಮಾಹಿತಿಯನ್ನು ಇಲಾಖೆಯವರು ನೀಡಿರುವ https:/kpme.karnataka.tech/ ಪೋರ್ಟಲ್ನಲ್ಲಿ ನೋಂದಣಿ ಮಾಡಬೇಕು.
ತಪ್ಪಿದಲ್ಲಿ ಅಂತಹ ಸಂಸ್ಥೆಯ ನೋಂದಣಿಯನ್ನು ಕರ್ನಾಟಕ ಪ್ರೈವೇಟ್ ಎಸ್ಟಾಬ್ಲಿಷ್‍ಮೆಂಟ್ ಆ್ಯಕ್ಟ್ 2007 ಹಾಗೂ ತಿದ್ದುಪಡಿ ಅಧಿನಿಯಮದ ಪ್ರಕಾರ ರದ್ದುಪಡಿಸಲು ಕ್ರಮ ವಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.