ETV Bharat / state

ಯುವತಿ ಜತೆಗಿನ ಖಾಸಗಿ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್‌ಮೇಲ್.. ಅಡ್ಡಕಸುಬಿಯ ಚಳಿ ಬಿಡಿಸಿದ ಜನರು.. ಇಂತವರಿಗೆ ಹೀಗೇ ಆಗಬೇಕು! - ಬ್ಲಾಕ್ ಮೇಲ್

ಯುವತಿಯೊಂದಿಗೆ ಕಳೆದಿದ್ದ ಕ್ಷಣಗಳನ್ನು ವಿಡಿಯೋ ಮಾಡಿ ಪದೇಪದೆ ಕಿರುಕುಳ ನೀಡುತ್ತಾ ಬ್ಲ್ಯಾಕ್‌​​ಮೇಲ್​ ಮಾಡುತ್ತಿದ್ದ ಭೂಪನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚಳಿ ಬಿಡಿಸಿದ ಜನರು
author img

By

Published : Sep 28, 2019, 9:49 AM IST

Updated : Sep 28, 2019, 11:54 AM IST

ಬೆಂಗಳೂರು : ಪ್ರೀತಿಸುವುದಾಗಿ ನಂಬಿಸಿ ಯುವತಿಯೊಂದಿಗೆ ಕಳೆದಿದ್ದ ಕ್ಷಣಗಳನ್ನು ವಿಡಿಯೋ ಮಾಡಿ ಪದೇಪದೆ ಕಿರುಕುಳ ನೀಡುತ್ತಾ, ಬ್ಲ್ಯಾಕ್ ​​ಮೇಲ್​ ಮಾಡುತ್ತಿದ್ದ ಅಡ್ಡಕಸುಬಿಯನ್ನು ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ.

ಬಿಗ್​​ಬಜಾರ್​ನಲ್ಲಿ ನೊಂದ ಯುವತಿ ಹಾಗೂ ಆರೋಪಿ ಸುನೀಲ್ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆದ ಪರಿಚಯ ಮುಂದೆ ಸ್ನೇಹವಾಗಿತ್ತು. ಅದೇ ಮುಂದೆ ಪ್ರೀತಿಗೆ ತಿರುಗಿದೆ. ನಂತರ ಸೆಪ್ಟೆಂಬರ್‌ 18ರಂದು ಯುವತಿ ಮನೆಗೆ ಹೋಗಿದ್ದ ಸುನೀಲ್ ಆಕೆಯನ್ನು ಪುಸಲಾಯಿಸಿ ಆಕೆ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾನೆ. ಅದನ್ನು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲ್ಯಾಕ್‌​ಮೇಲ್ ಮಾಡುತ್ತಾ ಬಂದಿದ್ದಾನೆ.

ಇಂತವರಿಗೆ ಹೀಗೇ ಆಗಬೇಕು..

ಇದೀಗ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಸದಸ್ಯರು ಸುನೀಲ್ ಮನೆಗೆ ನುಗ್ಗಿ ಆತನನ್ನು ಥಳಿಸಿದ್ದಾರೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುನೀಲ್​ನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Intro:Body:
ಯುವತಿ ಜತೆಗಿನ ಖಾಸಗಿ ದೃಶ್ಯ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡ್ತಿದ್ದವನಿಗೆ ಬಿತ್ತು ಸಖತ್ ಗೂಸಾ

ಬೆಂಗಳೂರು: ಪ್ರೀತಿಸುವುದಾಗಿ ನಂಬಿಸಿ ಯುವತಿಯೊಂದಿಗೆ ಕಳೆದಿದ್ದ ಕ್ಷಣಗಳನ್ನು ವಿಡಿಯೊ ಮಾಡಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ.
ಬಿಗ್ ಬಿಜಾರ್ ನಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಹಾಗೂ ನೊಂದ ಯುವತಿ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಹೀಗೆ ಪರಿಚಯವಾದ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ನಂತರ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ದಾಸಪ್ಪ ಬಡಾವಣೆಯಲ್ಲಿರುವ ಯುವತಿ ಮನೆಗೆ ಸೆ.18 ರಂದು ಹೋಗಿದ್ದ ಸುನೀಲ್ ಆಕೆಯನ್ನು ಪುಸಲಾಯಿಸಿ ಆಕೆ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾನೆ. ತದನಂತರ ಮೊಬೈಲ್ ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಈ ಸಂಬಂಧ ಆರ್.ಎಂ.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಸದಸ್ಯರು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ಮನೆಗೆ ನುಗ್ಗಿ ರೆಡ್ ಹ್ಯಾಂಡ್ ಆಗಿ ನುಗ್ಗಿ ಆತನನ್ನು ಥಳಿಸಿದ್ದಾರೆ.
ಘಟನೆ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿ ಸುನೀಲ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.Conclusion:
Last Updated : Sep 28, 2019, 11:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.