ETV Bharat / state

ಪೊಲೀಸರಿಗೆ ಹೊಸ ಟಾಸ್ಕ್: ಪ್ರತಿದಿನ 5 ಕೀ.ಮೀ ಓಡುವಂತೆ ಅಲೋಕ್ ಕುಮಾರ್ ಆದೇಶ - Adgp Alok Kumar

ರಾಜ್ಯ ಪೊಲೀಸ್ ಮೀಸಲು ಪಡೆ ಸಿಬ್ಬಂದಿ ಪ್ರತಿದಿನ ಐದು ಕೀ.ಮೀ‌ ಓಡುವಂತೆ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಕೆ ಎಸ್ ಆರ್ ಪಿ ಸಿಬ್ಬಂದಿಗೆ ಕೊರೊನಾ
ಕೆ ಎಸ್ ಆರ್ ಪಿ ಸಿಬ್ಬಂದಿಗೆ ಕೊರೊನಾ
author img

By

Published : Oct 16, 2020, 3:29 PM IST

ಬೆಂಗಳೂರು: ಫಿಟ್ ಇಂಡಿಯಾ ಅಭಿಯಾನದಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ರಾಜ್ಯ ಪೊಲೀಸ್ ಮೀಸಲು ಪಡೆ (ಕೆಎಸ್ ಆರ್ ಪಿ) ಸಿಬ್ಬಂದಿ ಪ್ರತಿದಿನ ಐದು ಕಿ.ಮೀ‌ ಓಡುವಂತೆ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ವಿಶ್ವದಲ್ಲೇ ಮಾರಕವಾಗಿ ಕಾಡುತ್ತಿರುವ ಕೊರೊನಾ ಸೋಂಕಿನಿಂದ ಲಕ್ಷಾಂತರ ಜನರು ಜೀವ ಕಳೆದುಕೊಂಡಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಹ ನೂರಾರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಕೊರೊನಾ ಬರದಂತೆ ನಿಯಂತ್ರಿಸಲು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಠಿಯಿಂದ ಪ್ರತಿದಿನ ಐದು ಕೀ.ಮಿ ಓಡಬೇಕು ಎಂದು ಕೆಎಸ್‌ಆರ್‌ಪಿಯ ಎಲ್ಲಾ ಬೆಟಾಲಿಯನ್ ಮುಖ್ಯಸ್ಥರಿಗೆ ಅಲೋಕ್ ಕುಮಾರ್ ಆದೇಶ ಪಾಲಿಸುವಂತೆ ತಾಕೀತು ಮಾಡಿದ್ದಾರೆ.

ರಾಜ್ಯದಲ್ಲಿ 14 ಸಾವಿರ ಕೆಎಸ್ ಆರ್ ಪಿ ಪೊಲೀಸರಿದ್ದಾರೆ. 40 ವರ್ಷದೊಳಗಿನ ಸಿಬ್ಬಂದಿ ಪ್ರತಿದಿನ 5 ಕೀ.ಮಿ.‌ಓಡಬೇಕು. 40 ರಿಂದ 50 ವರ್ಷದ ಮೇಲ್ಪಟ್ಟವರು 5 ಕೀ.ಮೀ ಓಡಬೇಕು ಅಥವಾ ನಡೆಯಬೇಕು. 50 ವರ್ಷಕ್ಕಿಂತ ಮೇಲ್ಪಟ್ಟವರು ನಡೆಯಬೇಕು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಖಾಯಿಲೆ ಇದ್ದವರಿಗೆ ರಿಯಾಯಿತಿ ನೀಡಲಾಗಿದೆ. ಸದೃಢ ಆರೋಗ್ಯ ಕಾಯ್ದುಕೊಳ್ಳಲು ಈ‌ ಆದೇಶ ಹೊರಡಿಸಲಾಗಿದೆ. ಸಿಬ್ಬಂದಿ ಓಡಿರುವುದಾಗಿ ಸುಳ್ಳು ಹೇಳಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಅಲೋಕ್‌ ಕುಮಾರ್ ಅವರು ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಫಿಟ್ ಇಂಡಿಯಾ ಅಭಿಯಾನದಡಿ ಸೈಕ್ಲಿಂಗ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೇ ಕೊರೊನಾದಿಂದ ಗುಣಮುಖರಾದ 25 ಕ್ಕಿಂತ ಹೆಚ್ಚು ಜನರಿಂದ ಪ್ಲಾಸ್ಮಾ ದಾನ ಮಾಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.