ಕಲಬುರಗಿ: ಜಿಲ್ಲೆಯಲ್ಲಿ ಇಂದು 13 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 896ಕ್ಕೆ ಏರಿದೆ.
ನಾಲ್ವರು ಮಕ್ಕಳು, ಐವರು ಮಹಿಳೆಯರು, ನಾಲ್ವರು ಪುರುಷರಿಗೆ ಸೋಂಕು ತಗುಲಿದೆ. ಮೂವರಿಗೆ ದ್ವಿತೀಯ ಸಂಪರ್ಕದಿಂದ ಸೋಂಕು ತಗುಲಿದೆ. ಉಳಿದವರು ಮಹಾರಾಷ್ಟ್ರದಿಂದ ಬಂದವರು.
ಇಂದು 50 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದರಿಂದಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 427 ಕ್ಕೆ ಏರಿದೆ.