ಬೆಳಗಾವಿ: ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಕಾರಣರಾಗಿದ್ದರು. ಇದೀಗ ಈ ದಾಳವನ್ನು ಗೋಕಾಕ್ ನಗರಸಭೆ ಮೇಲೂ ಉರುಳಿಸಿ ಯಶಸ್ವಿಯಾಗಿದ್ದಾರೆ.
ಗೋಕಾಕ್ ನಗರಸಭೆಯ ಕಾಂಗ್ರೆಸ್ ಬೆಂಬಲಿತ 12 ಜನ ಪಕ್ಷೇತರ ಸದಸ್ಯರು ದಿಢೀರ್ ಬಿಜೆಪಿ ಸೇರಿದ್ದಾರೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತವರಲ್ಲೇ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟಾಗುವಂತೆ ಮಾಡಿದೆ.
ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ತಂತ್ರಗಾರಿಕೆಯ ಪರಿಣಾಮ ಈ ಬಾರಿ ಗೋಕಾಕ್ ನಗರಸಭೆ ಬಿಜೆಪಿ ಪಾಲಾಗುವುದು ಖಚಿತವಾಗಿದೆ.