ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಹಾಡು ಹಗಲೇ ಯುವಕನ ಕೊಲೆ ನಡೆದಿದ್ದು, ಶಿವಮೊಗ್ಗ ಜನತೆ ಬೆಚ್ಚಿ ಬಿದ್ದಿದೆ. ರಾಹೀಲ್ (30) ಕೊಲೆಯಾದ ಯುವಕ, ಅಸ್ಗರ್(19) ಎಂಬಾತ ಕೊಲೆಗೈದ ಆರೋಪಿ ಎಂದು ಗುರುತಿಸಲಾಗಿದೆ.
ನಿನ್ನೆ ಅಸ್ಗರ್ನ ತಂದೆಯ ಬೈಕ್ ರಾಹೀಲ್ ಸೈಕಲ್‌ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ, ಜಗಳ ಉಂಟಾಗಿ ಕೊಲೆಯಾದ ರಾಹೀಲ್, ಅಸ್ಗರ್ ತಂದೆಯ ಕೆನ್ನೆಗೆ ಹೊಡೆದಿದ್ದನಂತೆ. ಕೊನೆಗೆ ಸೈಕಲ್ ರಿಪೇರಿ ಮಾಡಿಕೊಡುವ ತೀರ್ಮಾನದಲ್ಲಿ ಗಲಾಟೆ ಅಂತ್ಯವಾಗಿತ್ತು.
‘ಆದರೆ, ತನ್ನ ತಂದೆಗೆ ಹೊಡೆದಿದ್ದ ಕೋಪದಲ್ಲಿದ್ದ ಅಸ್ಗರ್, ಇಂದು ನಗರದ ಟ್ಯಾಂಕ್ ಮೊಹಲ್ಲದ 3 ನೇ ತಿರುವಿನಲ್ಲಿ ರಾಹೀಲ್ನನ್ನು ತಡೆದು ಏಕಾಏಕಿ ತಾನು ತಂದಿದ್ದ ಚಾಕುವಿನಿಂದ ಹೊಟ್ಟೆಗೆ ನಾಲ್ಕೈದು ಬಾರಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ರಾಹೀಲ್ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.
ಓದಿ: ಬಹುನಿರೀಕ್ಷಿತ SSLC ಫಲಿತಾಂಶ ಪ್ರಕಟ: ಓರ್ವ ವಿದ್ಯಾರ್ಥಿನಿ ಬಿಟ್ಟು ಎಲ್ಲರೂ ಪಾಸ್
ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಶೇಖರ್, ಕೋಟೆ ಪೊಲೀಸ್ ಠಾಣೆ ಪಿಐ ಚಂದ್ರಶೇಖರ್ ಭೇಟಿ ನೀಡಿದ್ದರು. ಬಳಿಕ ಆರೋಪಿ ಅಸ್ಗರ್ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.