ETV Bharat / state

ಪರಿಸರ ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ: ಸಾಲುಮರದ ತಿಮ್ಮಕ್ಕ - world environment day celebration in shivamogga

ವಿಶ್ವ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ನೀವು ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಪ್ರಕೃತಿಯ ಗಿಡ - ಮರಗಳನ್ನು ರಕ್ಷಿಸಿ, ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಶುಭ ಹಾರೈಸಿದರು.

world-environment-day-celebration-in-saint-joepsh-aksharadhama-school
ಪರಿಸರವನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ: ಸಾಲುಮರದ ತಿಮ್ಮಕ್ಕ
author img

By

Published : Jun 7, 2022, 8:22 PM IST

ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದು ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ. ಇವರು ನಗರದ ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆ ಹಾಗೂ ನಗರದ ಸರ್ಜಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೆಲ್ಲ ಸೇರಿ ಒಂದೂವರೆ ಸಾವಿರ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಅರ್ಥ ಪೂರ್ಣವಾಗಿ ಆಚರಿಸಿದರು.

ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆ ಹಾಗೂ ನಗರದ ಸರ್ಜಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮ

ವಿಶ್ವ ಪರಿಸರದ ದಿನಾಚರಣೆ ನಿಮಿತ್ತ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರದ ಪ್ರಬಂಧ ಬರೆಯುವ ಹಾಗೂ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪ್ರಾಥಮಿಕ, ಹೈಸ್ಕೂಲ್, ಪದವಿಪೂರ್ವ ಕಾಲೇಜು ವಿವಿಧ ಹಂತಗಳಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜೇತರಾದವರಿಗೆ 70 ಸಾವಿರದಷ್ಟು ಬಹುಮಾನ ಸಾಲುಮರದ ತಿಮ್ಮಕ್ಕನವರು ವಿತರಿಸಿದರು.

ಕಾರ್ಯಕ್ರಮದಲ್ಲಿ ವೈದ್ಯ ಡಾ.ಧನಂಜಯ್ ಸರ್ಜಿ ಅವರು ಮಾತನಾಡಿ, ಒಬ್ಬ ಮನುಷ್ಯ ಒಂದು ದಿನಕ್ಕೆ 11,500 ಲೀಟರ್ ಗಾಳಿ ತೆಗೆದುಕೊಂಡು, ಅಷ್ಟೆ ಪ್ರಮಾಣದಲ್ಲಿ ಗಾಳಿ ಹೊರಗೆ ಬಿಡುತ್ತಾನೆ. ಮಾನವನಿಗೆ ಶ್ವಾಸಕೋಶ ಹೇಗೆ ಕೆಲಸ ಮಾಡುತ್ತದೆಯೋ ಅಂತೆಯೇ ಪ್ರಕೃತಿಯ ಶ್ವಾಸಕೋಶ ವಾಗಿ ಮರಗಿಡಗಳು ಕಾರ್ಯನಿರ್ವಹಿಸುತ್ತದೆ.

ಒಂದು ಸಣ್ಣ ಮರ ಒಂದು ವರ್ಷಕ್ಕೆ ಇಬ್ಬರಿಗೆ ಸಾಕಾಗುವಷ್ಟು ಆಮ್ಲಜನಕ ಬಿಡುಗಡೆ ಮಾಡುತ್ತದೆ. ಒಂದು ದೊಡ್ಡ ಮರ ಒಂದು ವರ್ಷಕ್ಕೆ 10 ಜನಕ್ಕೆ ಆಗುವಷ್ಟು ಆಮ್ಲಜನಕ ನೀಡುತ್ತದೆ. ನಾವು ಕಾರನ್ನು ಬಳಸುವಾಗ ಉತ್ಪತ್ತಿಯಾಗುವ ವಾಯು ಮಾಲಿನ್ಯವನ್ನು ಸರಿಪಡಿಸಲು ಪ್ರಕೃತಿಗೆ ಒಂದು ಎಕರೆ ಜಮೀನು ಬೇಕು. ಸಾಲು ಮರದ ತಿಮ್ಮಕ್ಕನವರು 250 ಗಿಡಗಳನ್ನು ಮರವನ್ನಾಗಿ ಬೆಳೆಸಲು ನಿತ್ಯ ನೀರು ಹಾಕಿ ಬೆಳೆಸಿದ್ದಾರೆ. ಇವರ ಮರಗಳಿಂದ 2,500 ಜನರಿಗೆ ಶುದ್ಧ ಗಾಳಿ ದೊರೆಯುತ್ತಿದೆ ಎಂದು ಹೇಳಿದರು.

ಬಳಿಕ ಮಾತನಾಡಿದ ಸಾಲುಮರದ ತಿಮ್ಮಕ್ಕನವರು, ನೀವು ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಿಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಪ್ರಕೃತಿಯ ಗಿಡ - ಮರಗಳನ್ನು ರಕ್ಷಿಸಿ, ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.

ಓದಿ : ಪ್ರೀತಿಯ ನಾಯಿಗಾಗಿ ಜೀವದ ಹಂಗು ತೊರೆದ ಸಾಹಸಿ: ಮೈನವಿರೇಳಿಸುವ ದೃಶ್ಯ...!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.