ಶಿವಮೊಗ್ಗ: ತನ್ನ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿ ಎಂಬ ಕಾರಣಕ್ಕೆ ಮಕ್ಕಳಿಬ್ಬರನ್ನು ವಿಷನೀಡಿ ಹತ್ಯೆಗೈದ ಮಹಿಳೆ ಇಂದು ಮೃತಪಟ್ಟಿದ್ದಾಳೆ.
ತನ್ನ ಗಂಡ ತೀರಿಹೋದ ನಂತರ ಬೇರೆ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಭದ್ರಾವತಿಯ ಸುರಗಿತೋಪಿನ ಮಹಿಳೆ, ಜನವರಿ 4 ರಂದು ತನ್ನ ಇಬ್ಬರು ಮಕ್ಕಳನ್ನು ಶಿವಮೊಗ್ಗದ ಗಾಂಧಿಪಾರ್ಕ್‌ಗೆ ಕರೆದುಕೊಂಡು ಬಂದಿದ್ದಳು. ಈ ವೇಳೆ ಜ್ಯೂಸ್‌ನಲ್ಲಿ ವಿಷದ ಮಾತ್ರೆ ಹಾಕಿದ್ದಾಳೆ. ನಂತರ ಅಸ್ವಸ್ಥಗೊಂಡ ಮಕ್ಕಳನ್ನು ತಾನೇ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳಿಬ್ಬರು ಸಾವನ್ನಪ್ಪಿದ್ದರು.
ಓದಿ: ಮಳೆಯಾರ್ಭಟಕ್ಕೆ ವಾಣಿಜ್ಯ ನಗರಿ ತತ್ತರ: ನದಿಯಂತಾದ ರಸ್ತೆಗಳು, ತಗ್ಗು ಪ್ರದೇಶ ಜಲಾವೃತ
ನಂತರ ಕೋಟೆ ಪೊಲೀಸರು ಮಹಿಳೆಯ ವಿಚಾರಣೆ ನಡೆಸಿ, ಸುರಭಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಾಖಲಿಸಿದ್ದಾರೆ. ಆದರೆ, ಇಂದು ಬೆಳಗ್ಗೆ ತೀವ್ರ ಅನಾರೋಗ್ಯದಿಂದ ಬಳಲಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಲೋ ಬಿಪಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ.