ETV Bharat / state

ಕೌಟುಂಬಿಕ ಕಲಹ: 4 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ - ಶಿವಮೊಗ್ಗದಲ್ಲಿ ಮಗುವಿನೊಂದಿಗೆ ಬಾವಿಗೆ ಹಾರಿದ ತಾಯಿ

ಮಹಿಳೆಯೊಬ್ಬರು ತನ್ನ 4 ವರ್ಷದ ಮಗಳ ಜೊತೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ 50 ಅಡಿ ಆಳದ ಬಾವಿಯಿಂದ ತಾಯಿ - ಮಗಳ ಶವ ಮೇಲಕ್ಕೆ ಎತ್ತಿದ್ದಾರೆ.

Woman Commits Suicide Along With 4 Year Old Child In Shivamogga
4 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
author img

By

Published : Feb 3, 2022, 1:03 PM IST

ಶಿವಮೊಗ್ಗ: ಕೌಟಂಬಿಕ ಕಲಹದಿಂದ ನೊಂದ ವಿವಾಹಿತ ಮಹಿಳೆಯೊಬ್ಬಳು ತನ್ನ 4 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ನಡೆದಿದೆ.

Woman Commits Suicide Along With 4 Year Old Child In Shivamogga
4 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಬಿದರಹಳ್ಳಿ ಗ್ರಾಮದ ವಿದ್ಯಾ(32) ಎಂಬ ಮಹಿಳೆ ತನ್ನ 4 ವರ್ಷದ ತನ್ವಿ ಜೊತೆ ಮನೆಯ ಹಿಂಬದಿ ಇರುವ 50 ಅಡಿ ಅಳದ ಬಾವಿಗೆ ಹಾರಿ ಇಂದು ಬೆಳಗಿನ ಜಾವ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಯಮನಾಗಿ ಬಂದ ಹಾವು: ನಾಲೆಗೆ ಕಾರು ಬಿದ್ದು ಮಹಿಳೆ ಸಾವು

ವಿದ್ಯಾ ಬಾವಿಗೆ ಬೀಳುತ್ತಿದ್ದಂತೆಯೇ ಮನೆಯವರು ಹೊಸನಗರ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ನೋಡುವಷ್ಟರಲ್ಲಿ ತಾಯಿ-ಮಗಳು ಇಬ್ಬರೂ ಮೃತಪಟ್ಟಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿ ಭೀಷ್ಮಾಚಾರಿ 50 ಅಡಿ ಅಳದಿಂದ ತಾಯಿ - ಮಗಳ ಶವ ಮೇಲಕ್ಕೆ ಎತ್ತಿದ್ದಾರೆ. ಈ ತಂಡದಲ್ಲಿ ಠಾಣಾಧಿಕಾರಿ ರಾಜಪ್ಪ ಕೆ.ಟಿ ಹಾಗೂ ಸಿಬ್ಬಂದಿ ಸುರೇಶ್, ರಾಜೇಶ್ ಇದ್ದರು. ಹೊಸನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.