ಶಿವಮೊಗ್ಗ: ಲಾಕ್ಡೌನ್ನಲ್ಲಿ ಸಾರಾಯಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಭದ್ರಾವತಿಯ ಹೊಸಮನೆ ಬಡಾವಣೆಯ ಮುಖ್ಯ ರಸ್ತೆಯ ಧನುಶ್ರೀ ವೈನ್ ಶಾಪ್ನಲ್ಲಿ ನಿನ್ನೆ ರಾತ್ರಿ ಅಂಗಡಿಯ ಹಿಂಬದಿ ಗೋಡೆ ಒಡೆದು ಕಳ್ಳತನ ಮಾಡಲಾಗಿದೆ.
ಲಾಕ್ಡೌನ್ ಮಾಡುವ ದಿನ ಅಂಗಡಿಗೆ ಮಾಲು ಇಳಿಸಿಕೊಂಡಿದ್ದ ಮಾಲೀಕನಿಗೆ ಇಂದು ಅಂಗಡಿಗೆ ಕನ್ನ ಹಾಕಿರುವುದು ತಿಳಿದು ಬಂದಿದೆ. ಅಂಗಡಿಯ ಹಿಂಬದಿ ಕುಳಿತು ಗೋಡೆಗೆ ಕನ್ನ ಕೊರೆದಿರುವ ಖದೀಮರು, ಅಲ್ಲಿಂದ ಒಳಗೆ ನುಗ್ಗಿ ಅಂಗಡಿಯಲ್ಲಿ ಜೋಡಿಸಿದ್ದ ಬಾಟಲಿಗಳನ್ನು ಹೊತ್ತುಕೊಂಡು ಹೋಗಿದ್ದಾರೆ.
ಸದ್ಯ ಅಂದಾಜು 60 ಸಾವಿ ರೂ. ಮೌಲ್ಯದ ಮದ್ಯ ಕಳ್ಳತನವಾಗಿದೆ. ಅಂಗಡಿ ಬಂದ್ ಮಾಡಿದ ದಿನ ಸ್ಟಾಕ್ ಇಳಿಸಿಕೊಂಡಿದ್ದ ದಿನ ಅಂಗಡಿಯವ ಲೆಕ್ಕ ತೆಗದುಕೊಂಡಿಲ್ಲ. ಇದರಿಂದ ಈಗ ಎಷ್ಟು ಸ್ಟಾಕ್ ಕಳ್ಳತನವಾಗಿದೆ ಎಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಹೊಸಮನೆ ಪೊಲೀಸರು ಹಾಗೂ ಅಬಕಾರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.