ETV Bharat / state

ಪೆಟ್ರೋಲ್-ಡೀಸೆಲ್​ 100ರ ಗಡಿ ದಾಟಿದೆ, ಹಾಗಂತ ಬಿಜೆಪಿಯವರು ಬಂಕ್​ಗೆ ಕಲ್ಲು ಹೊಡೀತಾರಾ: ಬೇಳೂರು ಗೋಪಾಲಕೃಷ್ಣ

author img

By

Published : Jun 14, 2023, 10:15 PM IST

Updated : Jun 14, 2023, 10:30 PM IST

ಕಾಂಗ್ರೆಸ್​ ಸರ್ಕಾರ ಬಂದಿದೆ. ಹಾಗಾಗಿ ಬಿಜೆಪಿಯವರು ಹತಾಶರಾಗಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಟೀಕಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ
ಶಾಸಕ ಬೇಳೂರು ಗೋಪಾಲಕೃಷ್ಣ

ಶಾಸಕ ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ: ಪೆಟ್ರೋಲ್- ಡೀಸೆಲ್​ ಬೆಲೆ ನೂರು ರೂಪಾಯಿ ಗಡಿ ದಾಟಿದೆ. ಈಗ ಪೆಟ್ರೋಲ್ ಬಂಕ್ ಮೇಲೆ ಬಿಜೆಪಿಯವರು ಕಲ್ಲು ಹೊಡೀತಾರಾ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು. ಶಿವಮೊಗ್ಗ ಮೆಸ್ಕಾಂ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತ ಕಲ್ಲು ತೂರಾಟ ನಡೆಸಿದ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹೋಗಿದೆ. ಕಾಂಗ್ರೆಸ್ ಸರ್ಕಾರ ಬಂದಿದೆ. ಹಾಗಾಗಿ ಬಿಜೆಪಿಯವರು ಹತಾಶರಾಗಿದ್ದಾರೆ ಎಂದರು.

ಬಿಜೆಪಿಯವರು ಪೆಟ್ರೋಲ್, ಡೀಸೆಲ್​ ಬೆಲೆ ಜಾಸ್ತಿ ಮಾಡಿದ್ರಲ್ಲಾ, ನಾವು ಕಲ್ಲು ತೂರಾಟ ಮಾಡಿಲ್ಲ. ಹೋರಾಟನೂ ಮಾಡಿಲ್ಲ. ಈಗ ಪೆಟ್ರೋಲ್- ಡೀಸೆಲ್​ ಬೆಲೆ ಎಷ್ಟಾಗಿದೆ. ಅದಕ್ಕೆ ಕಲ್ಲು ಹೊಡೀತಾರಾ. ನಾಚಿಗೆ ಆಗ್ಬೇಕು ಅವರಿಗೆ. ಅವರ ಸರ್ಕಾರ ಇದ್ದಾಗ ಏನೂ ಮಾಡಲಿಲ್ಲ. ಎಲ್ಲ ವಸ್ತುಗಳ ಬೆಲೆ ಜಾಸ್ತಿ ಮಾಡಿಕೊಂಡು ಬಂದ್ರು. ಮಾನ- ಮರ್ಯಾದೆ ಇದೆಯಾ ಅವರಿಗೆ‌? ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದವರನ್ನು ಅರೆಸ್ಟ್ ಮಾಡಬೇಕು: ವಿರೋಧ ಪಕ್ಷವಾಗಿ ಹೋರಾಟ ಮಾಡೋಕೆ ಅವಕಾಶ ಇದೆ. ಆದರೆ, ಕಲ್ಲು ಹೊಡಿಯೋದು ತಪ್ಪು. ಅಂತವರನ್ನೆಲ್ಲ ಅರೆಸ್ಟ್ ಮಾಡಿ, ಜೈಲಿಗೆ ಕಳುಹಿಸಬೇಕು. ಪ್ರತಿಭಟನೆಯ ನೇತೃತ್ವ ವಹಿಸಿದವರನ್ನು ಅರೆಸ್ಟ್ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಶಕ್ತಿ ಯೋಜನೆಗೆ ಉತ್ತಮ‌ ಸ್ಪಂದನೆ: ವಾಯವ್ಯ ಸಾರಿಗೆಯಲ್ಲಿ ಜೂ.13ರಂದು ಪ್ರಯಾಣಿಸಿದ ಮಹಿಳೆಯರೆಷ್ಟು ಗೊತ್ತೇ?

ಬಿಜೆಪಿಯವರು ಹತಾಶರಾಗಿ ಹೀಗೆಲ್ಲ ಮಾಡ್ತಿದ್ದಾರೆ: ಬಿಜೆಪಿಯ ಸರ್ಕಾರ ಬೆಲೆ ಏರಿಕೆ ಮಾಡಿದಾಗ ನಾವು ಹೋರಾಟ ಮಾಡಿದ್ವಿ, ಆದರೆ ನಾವು ಎಲ್ಲೂ ಕಲ್ಲು ಹೊಡೆದಿಲ್ಲ. ಮೋದಿಜೀ ಬಂದರೂ ರಾಜ್ಯದಲ್ಲಿ ಇಷ್ಟು ಹೀನಾಯವಾಗಿ ಸೋತಿದ್ದಾರೆ. ಬಿಜೆಪಿಯವರು ಹತಾಶರಾಗಿ ಹೀಗೆಲ್ಲ ಮಾಡ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: ರಾಜ್ಯದ 8 ಕಡೆ ಸಣ್ಣ ಕೈಗಾರಿಕೆ ಹಬ್ ಸ್ಥಾಪಿಸಲು ಚಿಂತನೆ: ಸಚಿವ ಶರಣ ಬಸಪ್ಪ ದರ್ಶನಾಪೂರ್

ಲೋಕಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಲೋಕಸಭೆಯಲ್ಲಿ ಹೆಚ್ಚು ಸ್ಥಾನ ತಗೋಬೇಕು ಎಂಬ ಇರಾದೆಯಿದೆ. ಬಿಜೆಪಿ ಆಡಳಿತ ದುರ್ಬಲ ಆಗುತ್ತಿದೆ. ಒಳ್ಳೆಯ ಅಭ್ಯರ್ಥಿ ಹಾಕಿದ್ರೆ ಈ ಬಾರಿ ಗೆಲ್ತೇವೆ. ಶೀಘ್ರದಲ್ಲೇ ಚುನಾವಣಾ ಕಾವು ಶುರುವಾಗುತ್ತೆ. ಅದಕ್ಕೂ ಮೊದಲು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್​ಗೆ ಒತ್ತು ಕೊಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ: ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಶಾಸಕರ ನಿಯೋಗ

ಗೀತಾ ಶಿವರಾಜ್ ಕುಮಾರ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಅವರು ಆಕಾಂಕ್ಷಿನಾ ಏನು ಅಂತಾ ಗೊತ್ತಿಲ್ಲ. ಪಕ್ಷ ತಾನೇ ಹೇಳಬೇಕು. ಹೈಕಮಾಂಡ್ ಪಕ್ಷ ಹೇಳಿದಂತೆ ಕೆಲಸ ಮಾಡುತ್ತೇವೆ. ಯಾರೇ ನಿಂತರೂ ಹೋರಾಟ ಮಾಡ್ಬೇಕು, ಮಾಡ್ತೀವಿ. ಪಕ್ಷಕ್ಕೆ ಬರೋದು ಬೇಡ ಅಂತ ಯಾರು ಹೇಳಲ್ಲ ಎಂದರು.

ಇದನ್ನೂ ಓದಿ: ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆಯಲ್ಲಿ ಭಾಗಿಯಾದ್ರೆ ಕಠಿಣ ಕ್ರಮ: ಸಚಿವ ಚಲುವರಾಯಸ್ವಾಮಿ

Last Updated : Jun 14, 2023, 10:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.