ETV Bharat / state

ತುಂಗಭದ್ರಾ ಕಾರ್ಖಾನೆ ಜಾಗ ಖರೀದಿಸಿದ್ದು ಸಾಬೀತಾದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಬಿ.ವೈ.ರಾಘವೇಂದ್ರ - allegation on MP BY Raghavendra

ನನ್ನ ಮೇಲಿನ ಆರೋಪವನ್ನು ಸಾಬೀತುಪಡಿಸಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

MP BY Raghavendra
MP BY Raghavendra
author img

By ETV Bharat Karnataka Team

Published : Dec 25, 2023, 4:01 PM IST

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದರು.

ಶಿವಮೊಗ್ಗ: ತುಂಗಭದ್ರಾ ಸಕ್ಕರೆ ಕಾರ್ಖಾನೆಯ ಜಾಗವನ್ನು ಖರೀದಿಸಿರುವ ಕುರಿತು ರುಜುವಾತಾದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಬಹಿರಂಗವಾಗಿ ಸವಾಲು ಹಾಕಿದರು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಅನ್ಯಾಯ ಮಾಡಿ ಡಬಲ್ ಗೇಮ್ ಮಾಡುವುದು ನಮ್ಮ ಪಕ್ಷ ನನಗೆ ಹೇಳಿಕೊಟ್ಟಿಲ್ಲ. ನಾನು ಆ ಜಾಗವನ್ನು ಖರೀದಿಸಿರುವುದನ್ನು ಸಾಬೀತುಪಡಿಸಿದರೆ, ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದರು. ಅಲ್ಲದೇ ಕಾಂಗ್ರೆಸ್​ನ ದೇವೆಂದ್ರಪ್ಪನವರು ಈ ಆರೋಪ ಮಾಡಿದ್ದಾರೆ. ಅವರು ಆರೋಪ ಸಾಬೀತುಪಡಿಸಬೇಕು, ಇಲ್ಲವಾದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ಹೊಡುವೆ ಎಂದು ಎಚ್ಚರಿಕೆ ನೀಡಿದರು.

ಸಕ್ಕರೆ ಕಾರ್ಖಾನೆ ಈಗ ಬಂದ್ ಆಗಿದೆ. ಈ ಕಾರ್ಖಾನೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ನೂರಾರು ಎಕರೆ ಜಾಗವಿದೆ. ಕಾರ್ಖಾನೆಯನ್ನು ಸಂಸದ ರಾಘವೇಂದ್ರ ಹಾಗೂ ಅವರ ಕುಟುಂಬ ಖರೀದಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಲೇ ತಮ್ಮ ವಿರುದ್ಧ ಆರೋಪ ಮಾಡಿದವರ ವಿರುದ್ಧ ಅವರು ಗರಂ ಆದರು.

ಕಾರ್ಖಾನೆಗೆ ಸಂಬಂಧಪಟ್ಟಂತೆ ಉಳುಮೆ ಮಾಡುತ್ತಿರುವ ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಖಾನೆ 1950ರಿಂದ 1980ರತನಕ ಯಶಸ್ವಿಯಾಗಿ‌ ನಡೆದು‌ಕೊಂಡು ಬಂದಿತ್ತು. 1994ರಲ್ಲಿ ಚೆನ್ನೈನ ದೇವಿ ಶುಗರ್ಸ್​ಗೆ ವಹಿಸಲಾಗುತ್ತದೆ. ಇವರು ಎಸ್​ಬಿಐ ಸಾಲ ತೀರಿಸಲಾಗದೇ ಮದ್ರಾಸ್ ಹೈಕೋರ್ಟ್ ಲಿಕ್ವಟೇಷನ್ ಮಾಡುತ್ತಾರೆ. 2023ರಲ್ಲಿ ಕೋರ್ಟ್ ಲಿಕ್ವಟೇಷನ್ ರದ್ದುಪಡಿಸಿದ್ದು, ಸರ್ಕಾರಕ್ಕೆ ಕಟ್ಟಬೇಕಾದ ಕಂದಾಯ ಹಾಗೂ ಬಾಕಿ ಸಾಲ ಸಂದಾಯ ಮಾಡಬೇಕು. ಅಲ್ಲದೇ ಕಳೆದ 30 ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಯರಗನಾಳ್ ಗ್ರಾಮದಲ್ಲಿ 1,350 ಎಕರೆ ಕಾರ್ಖಾನೆಯ ಜಾಗವಿದೆ. ಇಲ್ಲಿ 250 ಜನ ರೈತರು ಸಾಗುವಳಿ‌ ಮಾಡುತ್ತಿದ್ದಾರೆ. ಹರಿಗೆಯಲ್ಲಿ 129 ಎಕರೆ ಇದ್ದು ಇದರಲ್ಲಿ 398 ವಾಸದ ಮನೆಗಳಿವೆ. ತೋಪಿನಘಟ್ಟ ಗ್ರಾಮದಲ್ಲಿ 35 ಎಕರೆ ಇದೆ. ಮಲವಗೊಪ್ಪ 26.33 ಗುಂಟೆಯಲ್ಲಿ ಮನೆಗಳಿವೆ. 35.24 ಗುಂಟೆಯಲ್ಲಿ ದೇವಾಲಯ, ಕಲ್ಯಾಣಿ, ಕಾಡಾ ಕಚೇರಿ, ಆರ್‌ಟಿಒ ಇದೆ. ಈಗ ರಸ್ತೆ ಅಗಲಿಕರಣದಿಂದ ಹೋದ ಮನೆಗಳಿಗೆ ಪರಿಹಾರ ನೀಡಲು ಆಗುತ್ತಿಲ್ಲ ಎಂದು ಹೇಳಿದರು.

ನಿದಿಗೆಯಲ್ಲಿ 18 ಎಕರೆ, ಸದಾಶಿವಪುರದಲ್ಲಿ‌ 161 ಎಕರೆ ಭೂಮಿ ಇದೆ. ಇಲ್ಲಿ 121 ಜನರ ರೈತರಿಗೆ ಸಕ್ರಮವಾಗಿದೆ. ಯಾರು 25 ವರ್ಷಗಳಿಗಿಂತ ಹೆಚ್ಚು ಒಂದೇ ಜಾಗದಲ್ಲಿ ವಾಸವಾಗಿರುತ್ತಾರೋ ಅವರನ್ನು ತೆರವು ಮಾಡುವಂತಿಲ್ಲ ಎಂದು ಕೋರ್ಟ್ ಆದೇಶವಿದೆ. ಸಕ್ಕರೆ ಕಾರ್ಖಾನೆ ಜಾಗದಲ್ಲಿ ಉಳುಮೆ ಮಾಡುತ್ತಿದ್ದವರು ಅಕ್ರಮ ಸಕ್ರಮದಲ್ಲಿ ಅರ್ಜಿ ಹಾಕಿದ್ದು, ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು. ತುಂಗಭದ್ರ ಸಕ್ಕರೆ ಕಾರ್ಖಾನೆಯ ಜಾಗವನ್ನು ಶಿವಮೊಗ್ಗದ ಸರ್ವಾಂಗಿಣ ಅಭಿವೃದ್ದಿಗೆ ಬೇಕಾಗುತ್ತದೆ. ಈ ಜಾಗವನ್ನು ಸರ್ಕಾರವೇ ಖರೀದಿಸಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಬೇಕು ಎಂದೂ ಸಹ ಇದೇ ವೇಳೆ ಮನವಿ ಮಾಡಿದರು.

ಇದನ್ನೂ ಓದಿ: ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ ಮೋಸ, ಕಬ್ಬು ಬೆಳೆಗಾರರ ಪರ ನಿಲ್ಲದ ಸರ್ಕಾರ: ಶ್ರೀಮಂತ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.