ETV Bharat / state

ಕೊರೊನಾ ನಿಯಂತ್ರಣ ನಿರ್ಧಾರ: ಶಿವಮೊಗ್ಗದಲ್ಲಿ ದಿನಸಿ‌ ಸಗಟು ವ್ಯಾಪಾರಿಗಳಿಂದ ಸ್ವಯಂ ಪ್ರೇರಿತ ಬಂದ್

author img

By

Published : Jul 1, 2020, 1:12 PM IST

ಮಹಾಮಾರಿ ಕೊರೊನಾ ವೈರಸ್​ ಹರಡುವುದನ್ನು ತಡೆಯಲು‌ ಶಿವಮೊಗ್ಗದ ದಿನಸಿ‌ ಸಗಟು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ಮಾದರಿಯಾಗಿದ್ದಾರೆ.

wholesalers are self-Inspired bandh
ಮಳಿಗೆಗಳು ಬಂದ್​​​

ಶಿವಮೊಗ್ಗ: ಕೊರೊನಾ ವೈರಸ್​​ ಹರಡುವುದನ್ನು ತಡೆಯುವ ಸಲುವಾಗಿ ಜಿಲ್ಲೆಯ ದಿನಸಿ ಸಗಟು ವ್ಯಾಪಾರಿಗಳು ಸ್ವಯಂ ಪ್ರೇರಿತ ಬಂದ್​​​​​​ಗೆ ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ವ್ಯಾಪಾರ ನಡೆಸಿ ನಂತರ ಮಳಿಗೆಯನ್ನು ಮುಚ್ಚಲಿದ್ದಾರೆ.

ಸಗಟು ವ್ಯಾಪಾರಿಗಳು ರಾತ್ರಿ ‌ತನಕ ವ್ಯಾಪಾರ ನಡೆಸಿದರೆ, ಜನ ಬರುತ್ತಾರೆ. ಹೆಚ್ಚು ಹಣವೂ ಬರುತ್ತದೆ. ‌ಆದರೆ, ಅವರೊಂದಿಗೆ ಕೊರೊನಾ ಸಹ ಬರುತ್ತದೆ. ಹೀಗಾಗಿ, ದಿನಸಿ ವರ್ತಕರ ಸಂಘವು ಕೊರೊನಾ ಹಾವಳಿ ತಡೆಯಲು ಈ ತೀರ್ಮಾನ ಕೈಗೊಂಡಿದೆ ಎಂದು ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಈಟಿವಿ ಭಾರತಕ್ಕೆ ತಿಳಿಸಿದರು.

ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್​ ಮಾಡಿದ ವ್ಯಾಪಾರಿಗಳು​​

ಅಂಗಡಿಗಳು ಬಂದ್ ಆದ ನಂತರ ರಸ್ತೆಗಳು ಖಾಲಿ ‌ಖಾಲಿ ಹೊಡೆಯುತ್ತವೆ. ಜನರ ಓಡಾಟ ಇರುವುದಿಲ್ಲ. ವಾಹನ ಸಂಚಾರವೂ ಅಷ್ಟಕಷ್ಟೇ. ಸಗಟು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್​ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರದ ಜೊತೆಗೆ ಜನರ ಸಹಕಾರವೂ ಮುಖ್ಯ ಎಂಬ ಸಂದೇಶವನ್ನು ಈ ಮೂಲಕ ಅವರು ರವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.