ಶಿವಮೊಗ್ಗ: ಪದೇ ಪದೇ ಸೋತರೆ ನಾನು ಏನಾಗಬೇಕು ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ಮಧು ಬಂಗಾರಪ್ಪ ಕುಬಟೂರಿನಲ್ಲಿಂದು ಭಾವುಕರಾಗಿ ಮಾತನಾಡಿದ್ದಾರೆ.
ಸೊರಬದ ಕುಬಟೂರು ಮಧು ಬಂಗಾರಪ್ಪನವರ ಹುಟ್ಟೂರು. ಇಲ್ಲಿ ನಡೆದ ಮೈತ್ರಿ ಪಕ್ಷದ ಪ್ರಚಾರದ ಸಭೆಯಲ್ಲಿ ಮಾತನಾಡಿದ ಅವರು, ನಾನು ಸೋತರೂ ಸೊರಬದಿಂದಲೇ ಸೋಲಬೇಕು, ಗೆದ್ರೂ ಸೊರಬದಿಂದಲೇ ಗೆಲ್ಲಬೇಕು.ಸೋತರೂ ನಾನು ಸೊರಬಕ್ಕೆ ಅನುದಾನ ತಂದಿದ್ದೇನೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತನ್ನನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದರು.
ನಾನು ಮತ್ತೆ ಮತ್ತೆ ಸೋತರೆ ನಿಮಗೆ ಅವಮಾನವಲ್ಲವೇ ಎಂದು ಮತದಾರರನ್ನು ಮಧು ಬಂಗಾರಪ್ಪ ಇದೇ ವೇಳೆ ಪ್ರಶ್ನಿಸಿದರು. ನಿರಂತರ ಸೋಲಿನಿಂದ ನಾನು ಪಾಠ ಕಲಿತಿದ್ದೇನೆ, ಜತೆಗೆ ಸೋತರು ಕ್ಷೇತ್ರದ ಜನರಿಗಾಗಿ ತುಡಿಯುತ್ತಿದ್ದೇನೆ. ಇದನ್ನು ಪರಿಗಣಿಸಿ ಈ ಬಾರಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ತಂದು ಕೊಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಕಾಂಗ್ರೆಸ್ನ ಶ್ರೀಧರ್ ಹುಲ‌್ತಿಕೊಪ್ಪ ಸೇರಿದಂತೆ ಉಭಯ ಪಕ್ಷಗಳ ನಾಯಕರು ಹಾಜರಿದ್ದರು.