ETV Bharat / state

ತಮ್ಮ ಕಲಾವಧಿಯಲ್ಲಿ ರಂಗಾಯಣದಲ್ಲಿ ರಚನಾತ್ಮಕ ಕೆಲಸಗಳಾಗಿವೆ: ಮಾಜಿ ಅಧ್ಯಕ್ಷ ಡಾ. ಗಣೇಶ್

author img

By

Published : Sep 16, 2019, 8:54 PM IST

ನಾನು ರಂಗಾಯಣ ನಾಟಕ ಸಂಸ್ಥೆಯ ಅಧ್ಯಕ್ಷನಾಗಿದ್ದಾಗ ರಚನಾತ್ಮಕ ಕೆಲಸಗಳನ್ನು ಮಾಡಿ ರಂಗಯಣದ ಹೆಸರನ್ನು ಪರಿಚಯ ಮಾಡಿದ್ದೇನೆ. ಉತ್ತಮ ಕೆಲಸ ಮಾಡಿರುವ ತೃಪ್ತಿ ನನಗಿದೆ ಎಂದು ರಂಗಾಯಣ ನಾಟಕ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಗಣೇಶ್ ಹೇಳಿದರು.

ಡಾ. ಗಣೇಶ್ , Ganesh

ಶಿವಮೊಗ್ಗ: ತಮ್ಮ ಅಧಿಕಾರವಧಿಯಲ್ಲಿ ರಂಗಾಯಣ ಸಂಸ್ಥೆಯಲ್ಲಿ ರಚನಾತ್ಮಕ ಕೆಲಸಗಳನ್ನು ಮಾಡುವ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿರುವ ತೃಪ್ತಿ ಇದೆ ಎಂದು ರಂಗಾಯಣ ನಾಟಕ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಗಣೇಶ್ ಹೇಳಿದರು.

ರಂಗಾಯಣದ ಮಾಜಿ ಅಧ್ಯಕ್ಷ ಡಾ. ಗಣೇಶ್

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಂಗಾಯಣ ನಿರ್ದೇಶಕರ ಹುದ್ದೆಯಿಂದ ಪದ ಮುಕ್ತಗೊಳಿಸಿದೆ. 2017ರಲ್ಲಿ ನಾನು ನಿರ್ದೇಶಕನಾಗಿ ನೇಮಕವಾಗಿದ್ದೆ. ಅಲ್ಲಿಂದ ಕ್ರಿಯಾಶೀಲ ರಂಗಚಟುವಟಿಕೆಗಳಲ್ಲಿ ತೊಡಗಿದ್ದು, ನನ್ನ ಜೊತೆಗೆ ಹಲವು ಗೆಳೆಯರು ,ರಂಗಾಸಕ್ತರು ಪ್ರಮುಖವಾಗಿ ಶಿವಮೊಗ್ಗದ ಸಾರ್ವಜನಿಕರು ತಮ್ಮೊಂದಿಗೆ ಸಹಕರಿಸಿದ್ದಾರೆ. ಇವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರು.

ರಂಗಾಯಣದಲ್ಲಿ ವಾರಾಂತ್ಯ ನಾಟಕಗಳನ್ನು ಏರ್ಪಡಿಸಿ ಮಾದರಿಯಾಗಿದ್ದೇವೆ. ಇದರ ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಾಟಕ ಪ್ರದರ್ಶನ ಮಾಡಿ ಗ್ರಾಮೀಣ ಭಾಗದಲ್ಲಿಯೂ ರಂಗಾಯಣದ ರಂಗ ತೇರನ್ನು ಎಳೆದಿರುವ ಹೆಮ್ಮೆ ನಮಗಿದೆ. ಕೇವಲ ಇಷ್ಟೇ ಅಲ್ಲದೇ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ತರಬೇತಿ ಮಾಡಿ ಚಿಣ್ಣರ ರಂಗೋತ್ಸವ ಕೈಗೊಂಡಿದ್ದೆವಿ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ನಾಟಕೋತ್ಸವ ಏರ್ಪಡಿಸಿ ಶಿವಮೊಗ್ಗದಲ್ಲಿ ರಂಗಭೂಮಿ ಹಬ್ಬವನ್ನೇ ಉಂಟು ಮಾಡಿರುವುದು ನಮ್ಮ ಹೆಮ್ಮೆಯ ವಿಷಯ ಎಂದರು.

ರಂಗಭೂಮಿಯ ಕಲಾವಿದರು ಯಾವುದೇ ಪಕ್ಷ ಪಾತವಿಲ್ಲದೇ ತಮ್ಮ ಕಾಯಕ ಮಾಡುತ್ತಿರುತ್ತಾರೆ. ಹಾಗಾಗಿ ಅವರ ಅಧಿಕಾರವಧಿ ಮುಗಿಯುವ ತನಕ ಅವರನ್ನ ಪದ ಮುಕ್ತಿಗೊಳಿಸಬಾರದು ಎಂದು ಬೇಸರ ವ್ಯಕ್ತಪಡಿಸಿದರು.

Intro:ಶಿವಮೊಗ್ಗ,
ತಮ್ಮ ಅಧಿಕಾರ ಅವಧಿಯಲ್ಲಿ ಶಿವಮೊಗ್ಗ ರಂಗಾಯಣ ಸಂಸ್ಥೆಯನ್ನು ರಚನಾತ್ಮಕ ಕೆಲಸಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡಿರುವ ತೃಪ್ತಿ ತಮಗಿದೆ ಎಂದು ರಂಗಾಯಣದ ಮಾಜಿ ಅಧ್ಯಕ್ಷ ಡಾ. ಗಣೇಶ್ ತಿಳಿಸಿದರು.

Body:ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರ ರಂಗಾಯಣ ನಿರ್ದೇಶಕರ ಹುದ್ದೆ ಯಿಂದ ಪದ ಮುಕ್ತಿಗೊಳಿಸಿದೆ
2017ರಲ್ಲಿ ನಾನು ನಿರ್ದೇಶಕನಾಗಿ ನೇಮಕವಾಗಿದ್ದೆ. ಅಲ್ಲಿಂದ ಕ್ರಿಯಾಶೀಲ ರಂಗಚಟುವಟಿಕೆಗಳಲ್ಲಿ ತೊಡಗಿದ್ದು. ನನ್ನ ಜೊತೆಗೆ ಹಲವು ಗೆಳೆಯರು ,ರಂಗಾಸಕ್ತರು ಪ್ರಮುಖವಾಗಿ ಶಿವಮೊಗ್ಗದ ಸಾರ್ವಜನಿಕರು ತಮ್ಮೊಂದಿಗೆ ಸಹಕರಿಸಿದ್ದಾರೆ ಇವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದರು.
ಶಿವಮೊಗ್ಗ ರಂಗಾಯಣವನ್ನು ಅತ್ಯುತ್ತಮ ಪ್ರಾಪರ್ಟಿ ಯಾಗಿ ರೂಪಿಸಲಾಗಿದೆ .
ವೈವಿಧ್ಯಮಯ ನಾಟಕಗಳನ್ನು ಪ್ರದರ್ಶನ ಮಾಡಿ ಆರು ನಾಟಕಗಳ ವಿಡಿಯೋ ದಾಖಲೀಕರಣ ಮಾಡಿ ಸಾಮಾಜಿಕಜಾಲತಾಣಗಳು ಬಿಡುಗಡೆ ಮಾಡುವ ಮೂಲಕ ಮುಂಬರುವ ಕಲಾವಿದರಿಗೆ ಇದರ ಪ್ರಯೋಜನ ವಾಗಲಿದೆ ಎಂದರು.
ರಂಗಾಯಣದಲ್ಲಿ ವಾರಾಂತ್ಯ ನಾಟಕಗಳನ್ನು ಏರ್ಪಡಿಸಿ ಮಾದರಿ ಯಾಗಿದ್ದೆವೆ. ಇದರ ಜೊತೆಗೆ ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ಕೇಲವು ಊರುಗಳಲ್ಲಿ ನಾಟಕ ಪ್ರದರ್ಶನ ಮಾಡಿ ಗ್ರಾಮೀಣ ಭಾಗದಲ್ಲಿ ರಂಗಾಯಣದ ರಂಗ ತೇರನ್ನು ಎಳೆದುಕೊಂಡು ಹೋಗಲಾಯಿತು. ಇದರ ಜೋತೆಗೆ ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ತರಬೇತಿ ಮಾಡಿ ಚಿಣ್ಣರ ರಂಗೋತ್ಸವ ಮಾಡಿದ್ದು ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ನಾಟಕೋತ್ಸವ ಏರ್ಪಡಿಸಿ ಶಿವಮೊಗ್ಗದಲ್ಲಿ ರಂಗಭೂಮಿ ಹಬ್ಬವನ್ನೇ ಉಂಟುಮಾಡಿರುವುದು ನಮ್ಮ ಹೆಮ್ಮೆಯ ವಿಷಯ ಎಂದರು.
ರಂಗಭೂಮಿ ಯ ಕಲಾವಿದರು ಯಾವುದೇ ಪಕ್ಷ ಪಾತವಿಲ್ಲದೇ ತಮ್ಮ ಕಾಯಕ ಮಾಡುತ್ತಿರುತ್ತಾರೆ ಹಾಗಾಗಿ ಅವರ ಅಧಿಕಾರವಧಿ ಮುಗಿಯುವ ತನಕ ಅವರನ್ನ ಪದ ಮುಕ್ತಿಗೊಳಿಸಬಾರದು ನನ್ನ ಅಧಿಕಾರವದಿ ಇನ್ನೂ ಏಳು ತಿಂಗಳು ಇತ್ತು ಆದರು ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.